ಭಟ್ಕಳ: ಚೌಥನಿಯ ಶ್ರೀ ಕಾಳಿಕಾಂಬಾ ದೇವಿಯ ಅಷ್ಟಬಂಧ, ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮವು ಫೆ.೪ ರಿಂದ ಫೆ.೮ರ ತನಕ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗಜಾನನ ನಾಗಪ್ಪಯ್ಯ ಆಚಾರ್ಯ ತಿಳಿಸಿದ್ದಾರೆ. ಅವರು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಐದು ದಿನದ ಕಾರ್ಯಕ್ರಮಗಳು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧೀಶ್ವರ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಮತ್ತು ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಶ್ರೀ ವಿಶ್ವಕರ್ಮ ಗುರುಜಗರ್ವ ಅನಂತ ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದೂ ತಿಳಿಸಿದ್ದಾರೆ.
ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಫೆ.೪ರಂದು ಬೆಳಿಗ್ಗೆ “ಸಾಮೂಹಿಕ ಪ್ರಾರ್ಥನೆ” ತೋರಣ ಪ್ರತಿಷ್ಠೆ, ಧ್ವಜ ಪ್ರತಿಷ್ಠೆ ಮಧ್ಯಾಹ್ನ ದೇವರ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಂತರ್ಪಣೆ, ಸಂಜೆ ಗುರು ಗಣಪತಿ ಪೂಜೆ, ಪುಣ್ಯಾಹವಾಚನ, ಪ್ರಸಾದ ಶುದ್ದಿ, ನಾಂದಿ, ಅಂಕುರ ಪೂಜೆ, ಕೌತುಕ ಬಂಧನ, ವಾಸ್ತು ರಾಕ್ಷೋಘ್ನ, ಹೋಮ ದಿಗ್ಬಲಿ, ದೇವರ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಂತರ್ಪಣೆ ನಡೆಯಲಿದೆ. ಫೆ.೫ರಂದು ಗಣಪತಿ ಹೋಮ, ನವಗ್ರಹ, ಮೃತ್ಯುಂಜಯ, ಐಕ್ಯ ಮತ್ಯ ಹೋಮಗಳು, ಮಧ್ಯಾಹ್ನ ದೇವರ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಂತರ್ಪಣೆ, ಸಂಜೆ ಪ್ರಾಯಶ್ಚಿತ ಹೋಮಗಳು, ಮಾರ್ಕಂಡೇಯ ಪುರಾಣ ಸಪ್ತಶತಿ ಪಾರಾಯಣ, ರಾತ್ರಿ ದೇವರ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಂತರ್ಪಣೆ. ಫೆ.೭ರಂದು ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ಕಾಳಿಕಾಂಬಾ ದೇವಿಯ ಅಷ್ಠಬಂಧ ಬ್ರಹ್ಮಕಲಶಾಭಿಷೇಕ ನಡೆಯಲಿರುವುದು. ಫೆ.೮ರಂದು ತುಲಾಭಾರ ಸೇವೆ, ಚಂಡಿಕಾಹೋಮ ಪ್ರಾರಂಭ, ಮಧ್ಯಾಹ್ನ ಮಹಾಪೂಜೆ, ಸುಹಾಸಿನಿ ಪೂಜೆ, ಬ್ರಹ್ಮಾರ್ಪಣೆ, ಮಂಗಳ ದಕ್ಷಿಣೆ, ಫಲಮಂತ್ರಾಕ್ಷತೆ, ಮಹಾ ಅನ್ನಸಂಪರ್ತಣೆ ನಡೆಯಲಿದೆ. ಸಂಪೂರ್ಣ ಕಾರ್ಯಕ್ರಮದ ವೈಧಿಕ ಸಹಭಾಗಿತ್ವವನ್ನು ಬ್ರಹ್ಮಶ್ರೀ ಎನ್. ಕೇಶವ ಪುರೋಹಿತರು ಹಾಗೂ ತಂತ್ರಿಗಳು, ಪ್ರಧಾನ ಅರ್ಚಕ ಬ್ರಹ್ಮಶ್ರೀ ಎನ್.ಎಸ್. ವಾಸುದೇವ ಶಾಸ್ತ್ರಿ, ಇತರ ವೈದಿಕರ ಸಹಭಾಗಿತ್ವದೊಂದಿಗೆ ನೆರವೇರಲಿದೆ ಎಂದೂ ತಿಳಿಸಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆಯೂ ಅವರು ಕೋರಿದ್ದಾರೆ.
ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರ ಗಜಾನನ ನಾಗಪ್ಪಯ್ಯ ಆಚಾರ್ಯ ವೆಂಕಟಾಪುರ, 2ನೇ ಮೊಕ್ತೇಸರರಾದ ಗೋವಿಂದ ಮಂಜುನಾಥ ಆಚಾರ್ಯ, ಕೌರ, 3ನೇ ಮೊಕ್ತೇಸರರಾದ ಶಿವರಾಮ ದೇವಪ್ಪ ಆಚಾರ್ಯ ಶಿರೂರು,ಗೌರವಾಧ್ಯಕ್ಷರು ಭೂದಾನ ಯೋಜನಾ ಸಮಿತಿ ಗೋಪಾಲ ಮಂಜಯ್ಯ ಆಚಾರ್ಯ, ಜಾಲಿ, , ಶ್ರೀ ಕಾಳಿಕಾಂಬಾ ಮಹಿಳಾ ಸಂಘ ಅಧ್ಯಕ್ಷರು
ಭಾರತಿ ಬಾಬು ಆಚಾರ್ಯ, ಮುರ್ಡೇಶ್ವರ, ಉಪ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ
ಸದಾನಂದ ಶಿವರಾಮ ಆಚಾರ್ಯ ಜಾಲಿ,
ಸದಾನಂದ ಮಂಜಯ್ಯ ಆಚಾರ್ಯ ಮುಂಡಳ್ಳಿ ,8 ಗಜಾನನ ಶಂಕರ ಆಚಾರ್ಯ ವೆಂಕ್ಟಾಪುರ ಹಾಗೂ ಉಪ ಕಾರ್ಯದರ್ಶಿ ಗಣೇಶ ಸುಬ್ರಾಯ ಆಚಾರ್ಯ ದೇವಿಕಾನ ಉಪಸ್ಥಿತರಿದ್ದರು