Slide
Slide
Slide
previous arrow
next arrow

ಕೈಗಾರಿಕಾ ಘಟಕದಲ್ಲಿ ಅನಿಲ ಸೋರಿಕೆ: ಕ್ರಮ ಕೈಗೊಳ್ಳಲು ಕರವೇ ನಗರಾಧ್ಯಕ್ಷ ರಾಜಾ ನಾಯ್ಕ್ ಆಗ್ರಹ

300x250 AD

ಕಾರವಾರ: ಬಿಣಗಾ ಗ್ರಾಸಿಮ್ ಇಂಡಸ್ಟ್ರೀಸ್ ಅನಿಲ ಸೋರಿಕೆಯಿಂದ  ಕಾರ್ಮಿಕರು  ಅಸ್ವಸ್ಥಗೊಂಡ ಪ್ರಕರಣದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸುರಕ್ಷತೆ ಕೈಗೊಳ್ಳುವಂತೆ ಉತ್ತರಕನ್ನಡ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ  ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕ ಅಧ್ಯಕ್ಷ ರಾಜಾ ನಾಯ್ಕ  ವಾಟ್ಸಾಪ್ ಹಾಗೂ ಇ ಮೇಲ್ ಮೂಲಕ ಮನವಿ ಸಲ್ಲಿಸಿದರು.

ತಾಲ್ಲೂಕಿನ ಬಿಣಗಾ ಗ್ರಾಮಲ್ಲಿನ ಗ್ರಾಸಿಮ್ ಇಂಡಸ್ಟ್ರೀಸ್ ಲಿಮಿಟೆಡ್ ಕೈಗಾರಿಕಾ ಘಟಕದಲ್ಲಿ ಶನಿವಾರ ಮಧ್ಯಾಹ್ನ ಅನಿಲ ಸೋರಿಕೆಯಿಂದ ಸುಮಾರು 19  ಕಾರ್ಮಿಕರು ಅಸ್ವಸ್ಥರಾಗಿರುವುದು  ದುರ್ದೈವದ ಘಟನೆಯಾಗಿದೆ. ಆದರೆ ಇಲ್ಲಿ ಕೆಲಸ ಮಾಡುವ ಉದ್ಯೋಗಿ ಕಾರ್ಮಿಕರು ಹಾಗೂ ಸಿಬ್ಬಂದಿಗಳು ತಂತಿ ಮೇಲಿನ ನಡಿಗೆ ಎಂಬಂತೆ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ಕಂಪನಿಯ ನಿರ್ಲಕ್ಷ್ಯದಿಂದ ಅಮಾಯಕ ಮುಗ್ಧ ಕಾರ್ಮಿಕರು ಸಾವು ನೋವುಗಳು ಅನುಭವಿಸುತ್ತಿರುವುದು  ಖಂಡನೀಯವಾಗಿದೆ.  ಗ್ರಾಸಿಮ್ ಇಂಡಸ್ಟ್ರೀಸ್‌ನಲ್ಲಿ  ಕಾರ್ಮಿಕರ ಭದ್ರತೆ  ಸುರಕ್ಷತೆ ಹಿತ ದೃಷ್ಟಿಯಿಂದ  ಇನ್ನುವರೆಗೂ ಏಕೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕಾರ್ಮಿಕರು  ಸ್ಥಳೀಯರು ಆರೋಪಿಸುತ್ತಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೋಲಿಸ್ ಇಲಾಖೆ ಕೂಡಲೇ ಎಚ್ಚೆತ್ತು ಇಂಥ  ಸಾವು ನೋವಿನ ಘಟನೆಗಳು ಮರುಕಳಿಸದಂತೆ ಕಂಪೆನಿಗೆ ಎಚ್ಚರಿಕೆ ನೀಡಿ ಮತ್ತು ಕಾರ್ಮಿಕರ  ಸುರಕ್ಷತೆಗೆ ಕೈಗೊಂಡ ಕ್ರಮ ಏನು ಎಂದು ಕಂಪೆನಿಯ ಅಧಿಕಾರಿಗಳು ಬಹಿರಂಗವಾಗಿ ತಿಳಿಸಬೇಕು. ಎಂದಿದ್ದಾರೆ.

300x250 AD

ಕಾರವಾರ ಬಿಣಗಾ ಗ್ರಾಮದಲ್ಲಿರುವ ಆದಿತ್ಯ ಬಿರ್ಲಾ ಕಂಪನಿಯ ಸುಮಾರು 50 ವರ್ಷಗಳ ಮೇಲ್ಪಟ್ಟ ಇತಿಹಾಸವಿದೆ.  ಬಿಣಗಾ ಬಿಲ್ಟ್ ಎಂದರೆ ರಾಜ್ಯದಲ್ಲಿ ಹೊರ ರಾಜ್ಯದಲ್ಲಿ   ಗುರುತಿಸಿಕೊಂಡಿದೆ. ಹಲವಾರು ಹಿರಿಯ ಅಧಿಕಾರಿಗಳು ಸಿಬ್ಬಂದಿಗಳು ಕಾರ್ಮಿಕರು ನಿವೃತ್ತಿಯಾಗಿದ್ದಾರೆ.  ಕಾರ್ಮಿಕರ ಸಿಬ್ಬಂದಿಗಳ  ಜೀವನಕ್ಕೆ ಅಡಿಪಾಯವಾಗಿರುವ ಈ  ಕಂಪನಿ ಆದರೆ  ಇತ್ತೀಚಿನ ದಿನಗಳಲ್ಲಿ ಈ ಕಂಪನಿ ಕಾರ್ಮಿಕರ ಸಿದ್ದಾಂತ ಸುರಕ್ಷತೆ ಭದ್ರತೆ ಕಾಪಾಡುವಲ್ಲಿ  ಎಡವಟ್ಟು ಮಾಡಿಕೊಂಡು ಪದೇ ಪದೇ ಅನಿಲ ಸೋರಿಕೆಯಿಂದ ಕಾರ್ಮಿಕರ ಸಾವು ನೋವಿಗೆ ಕಾರಣವಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತು ಈಗಾಗಲೇ ಗ್ರಾಸಿಮ್ ಇಂಡಸ್ಟ್ರೀಸ್ ಕಂಪನಿಯಲ್ಲಿ ಖಾಯಂ ಕಾರ್ಮಿಕರು  ಹಾಗೂ ಗುತ್ತಿಗೆ ಆಧಾರದ ಮೇರೆಗೆ ಕಾರ್ಮಿಕರು  ಐದು ನೂರಕ್ಕೂ ಹೆಚ್ಚು  ಕಾರ್ಮಿಕರು ದುಡಿಯುತ್ತಿದ್ದಾರೆ. ಒಂದು ವೇಳೆ ಪದೇ ಪದೇ ಅನಿಲ ಸೋರಿಕೆಯಾಗಿ  ಇಂಥ ಘಟನೆಗಳು ಸಂಭವಿಸಿ ಹೆಚ್ಚಿನ ಅನಾಹುತ ಸಂಭವಿಸಿದರೆ ಯಾರು ಹೊಣೆ ಹೋರುತ್ತಾರೆ.  ನಂತರ ಪುಡಿಕಾಸು
ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಾರೆ. ಆದರೆ ಈ ಕಾರ್ಮಿಕರ ತಂದೆ ತಾಯಿ ಅಕ್ಕ ತಂಗಿಯರ ಹೆಂಡತಿ ಮಕ್ಕಳ ಬದುಕಿಗೆ ಕೊಳ್ಳಿಇಟ್ಟು ಬೀದಿಗೆ ತಂದು ನಿಲ್ಲಿಸಿ ಬಿಡುತ್ತಾರೆ. ಆದ್ದರಿಂದ  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು  ಅಷ್ಟೆಯಲ್ಲದೇ  ಬೃಹತ್ ಕೈಗಾರಿಕಾ , ಕಾರ್ಮಿಕ ಸಚಿವರು  ಸಂಸದರು ಶಾಸಕರು ಇಂಥ ಗಂಭೀರ ಅವಘಡ ಘಟನೆಗಳು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.   ಜಿಲ್ಲಾಡಳಿತ  ಜಿಲ್ಲಾ ಪೋಲಿಸ್ ಇಲಾಖೆ ಸುರಕ್ಷಿತಾ ಕ್ರಮಗಳನ್ನು  ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು. ಕಂಪನಿ ಸುರಕ್ಷತೆ ಗ್ರಾಮಗಳನ್ನು ಪಾಲಿಸುವ  ಕಾರ್ಮಿಕರ ಸಿಬ್ಬಂದಿ ಜೀವ ಸುರಕ್ಷತೆ ಭದ್ರತೆ ಪಾಲಿಸಬೇಕು. ಇಲ್ಲದಿದ್ದರೆ ಮುಂದೊಂದು ದಿನ ಭೋಪಾಲ್ ಅನಿಲ ದುರಂತ ಘಟನೆ ಸಾಕ್ಷಿಯಾಗಬಹುದು. ಆದ್ದರಿಂದ ಕೂಡಲೇ   ಕಂಪನಿ ಕಾರ್ಮಿಕರ ಹಾಗೂ ಸಿಬ್ಬಂದಿಗಳ  ಸುರಕ್ಷತೆ ದೃಷ್ಟಿಯಿಂದ  ಗ್ರಾಸಿಮ್ ಇಂಡಸ್ಟ್ರೀಸ್ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದು  ತುಂಬಾ ಅಗತ್ಯವಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೂಡಲೇ ಮುಂಜಾಗ್ರತೆ ಕ್ರಮವಹಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ.

Share This
300x250 AD
300x250 AD
300x250 AD
Back to top