ಕುಮಟಾ: ಸ್ಥಳೀಯ ಭಾರತಿಯ ಕುಟುಂಬ ಯೋಜನಾ ಸಂಘ ಉತ್ತರ ಕನ್ನಡ ಶಾಖೆಯು ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ವೈದ್ಯಕೀಯ ಹಾಗೂ ಸಮಾಜ ಸೇವೆಗಾಗಿ ಅತ್ಯುತ್ತಮ ಶಾಖೆಯಾಗಿ ಗುರುತಿಸಲ್ಪಟ್ಟು ಒಟ್ಟೂ 47 ಶಾಖೆಗಳಲ್ಲಿ ದ್ವಿತೀಯ ಸ್ಥಾನದ ಪ್ರಶಸ್ತಿಯನ್ನು ಪಡೆದಿದೆ. ಈ ಪ್ರಶಸ್ತಿಯನ್ನು ಮುಂಬಯಿಯಲ್ಲಿ ನಡೆದ ರಾಷ್ಟ್ರಮಟ್ಟದ ಭಾರತೀಯ ಕುಟುಂಬ ಯೋಜನಾ ಸಂಘದ 75ನೇ ವರ್ಷದ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಶಾಖೆ ಕುಮಟಾದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ. ರೇವತಿ ನಾಯಕ ಹಾಗೂ ಶಾಖಾ ವ್ಯವಸ್ಥಾಪಕರಾದ ಶ್ರೀಮತಿ ಸಂತಾನ ಲೂಯೀಸ ಇವರು ಭಾರತಿಯ ಕುಟುಂಬ ಯೋಜನಾ ಸಂಘದ ರಾಷ್ಟ್ರಾಧ್ಯಕ್ಷರಾದ ಡಾ. ರತ್ನಮಾಲಾ ದೇಸಾಯಿ ಹಾಗೂ ನಿರ್ದೇಶಕರಾದ ಶ್ರೀಮತಿ. ನಿಶಾ ಜಗದೀಶ ಇವರಿಂದ ಸ್ವಿಕರಿಸಿದರು.
ಈ ಯಶಸ್ಸಿಗಾಗಿ ಉ.ಕ ಶಾಖೆಯ ಅಧ್ಯಕ್ಷರಾದ ಡಾ. ಅಶೋಕ ಭಟ್ ಹಳಕಾರ, ಉಪಾಧ್ಯಕ್ಷರಾದ ಡಾ. ಪ್ರೀತಿ, ಭಂಡಾರಕರ್ ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು ಹರ್ಷವ್ಯಕ್ತಪಡಿಸಿದ್ದು ಈ ಅಮೋಘ ಸಾಧನೆಯಲ್ಲಿ ಭಾಗಿಗಳಾದಂತಹ ಉ.ಕ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.