Slide
Slide
Slide
previous arrow
next arrow

ಫೆ.8,9ಕ್ಕೆ ‘ಸಿದ್ದಾಪುರ ಉತ್ಸವ’: ಕೆ.ಜಿ.ನಾಯ್ಕ್ ಮಾಹಿತಿ

300x250 AD

ಸಿದ್ದಾಪುರ : ಪ್ರತಿವರ್ಷದಂತೆ ಈ ವರ್ಷದ ಸಿದ್ದಾಪುರ ಉತ್ಸವ ಫೆಬ್ರವರಿ 8 ಹಾಗೂ 9 ರಂದು 2 ದಿನಗಳ ಕಾಲ ಜರುಗಲಿದೆ ಎಂದು ಸಿದ್ದಾಪುರ ಉತ್ಸವ ಸಮಿತಿ ಅಧ್ಯಕ್ಷ ಕೆ.ಜಿ ನಾಯ್ಕ ಹಣಜಿಬೈಲ್ ತಿಳಿಸಿದರು.

ಸಿದ್ದಾಪುರ ಪಟ್ಟಣದ ಸಿದ್ದಾಪುರ ಉತ್ಸವ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಥಳೀಯ ಕಲಾವಿದರಿಗೆ ಕೂಡ ಅವಕಾಶ ಕಲ್ಪಿಸೋ ನಿಟ್ಟಿನಲ್ಲಿ 2 ದಿನಗಳ ಕಾಲ ಈ ವರ್ಷದ ಸಿದ್ದಾಪುರ ಉತ್ಸವ ನಡೆಸಲಾಗುತ್ತಿದೆ. ತಾಲೂಕಿನಲ್ಲಿ ಜಾತ್ರೆ, ಉತ್ಸವಗಳು ಬರುತ್ತಿರೋ ಹಿನ್ನೆಲೆಯಲ್ಲಿ 3 ದಿನ ಇರೋ ಉತ್ಸವವನ್ನ 2 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಪಟ್ಟಣದ ನೆಹರೂ ಮೈದಾನದಲ್ಲಿ ಉತ್ಸವ ಜರುಗಲಿದೆ ಎಂದರು. ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭಗಳಿಗೆ ಸ್ವಾಮೀಜಿಗಳು, ಜಿಲ್ಲೆಯ ಸಂಸದರು, ಶಾಸಕರು ಸೇರಿದಂತೆ ಅನೇಕ ಗಣ್ಯರನ್ನು ಆಹ್ವಾನಿಸಲಾಗುವುದು. ತಾಲೂಕಿನ ಜನತೆ ಉತ್ಸವದಲ್ಲಿ ಪಾಲ್ಗೊಂಡು ಉತ್ಸವವನ್ನ ಯಶಸ್ವಿಗೊಳಿಸಬೇಕು ಎಂದರು.

300x250 AD

ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಸತೀಶ್ ಹೆಗಡೆ ಬೈಲಲ್ಲಿ, ಉಪಾಧ್ಯಕ್ಷ ಅನಿಲ್ ದೇವನಳ್ಳಿ, ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡರ್, ಸುರೇಶ್ ಮೆಸ್ತಾ, ರವಿಕುಮಾರ್ ನಾಯ್ಕ, ವಿನಯ್ ಹೊನ್ನೆಗುಂಡಿ ಮತ್ತು ಪದಾಧಿಕಾರಿಗಳು ಹಾಜರಿದ್ದರು.

Share This
300x250 AD
300x250 AD
300x250 AD
Back to top