ಕುಮಟಾ: ಕುಮಟಾ ಹೊಸಹೆರವಟ್ಟಾ ಮನೆಪಾಠ ಕೇಂದ್ರದ ಮಕ್ಕಳಿಗಾಗಿ ಕಣ್ಣು ತಪಾಸಣೆಯ ಶಿಬಿರವನ್ನು ಡಿ.24ರಂದು, ಬೆಳಕು ನೇತ್ರಾಲಯ ಕುಮಟಾ ಇವರ ಸಹಯೋಗದಲ್ಲಿ ನಡೆಸಲಾಯಿತು.
ಶಾಲೆಯ 42 ವಿದ್ಯಾರ್ಥಿಗಳು, 6 ಜನ ಪಾಲಕರು, 3 ಜನ ಶಿಕ್ಷಕಿಯರು, ಒಟ್ಟೂ 51 ಜನರ ತಪಾಸಣೆಯ ಪ್ರಯೋಜನ ಪಡೆದುಕೊಂಡರು. ಪ್ರಾರಂಭದಲ್ಲಿ ಸೇವಾ ಭಾರತಿ ಜಿಲ್ಲಾ ಸಂಯೋಜಕ ಜೆ.ಜಿ.ನಾಯ್ಕ ಸೇವಾ ಭಾರತಿಯ ಕಾರ್ಯಗಳ ಬಗ್ಗೆ ವಿವರಿಸಿ ನೇತ್ರಾಲಯದ ಸಿಬ್ಬಂದಿಗಳಿಗೆ ಸ್ವಾಗತಿಸಿದರು.
ಕೇಂದ್ರದ ಮಾತೃಶ್ರೀ ಸವಿತಾ ಗಾಡಿಗಾ ಪುಷ್ಪಗುಚ್ಛ ನೀಡಿ ಗೌರವಿಸಿದರು. ಡಾ. ಮಲ್ಲಿಕಾರ್ಜುನ ಸಿ.ಎಸ್ ಮಕ್ಕಳ ಕಣ್ಣಿನ ಸೂಕ್ಷ್ಮತೆಯ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. ಕೊನೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಗೀತಾ ವಂದನಾರ್ಪಣೆ ನಡೆಸಿಕೊಟ್ಟರು.