ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಪ್ರೌಢಶಾಲೆ ಗುಂದದ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಯ ಭಾಗವಾಗಿ ಶಾಲೆಯ ಮುಖ್ಯ ಶಿಕ್ಷಕರಾದ ಜೋಸೆಫ್ ಬಿ.ಜಿ.ಸರ್ ಮಾರ್ಗದರ್ಶನದಲ್ಲಿ ಶಾಲೆಯ ವಿಧ್ಯಾರ್ಥಿಗಳು ಅನಿಲ ರಹಿತ ಆಹಾರ ತಯಾರಿಕೆಯ ಪದಾರ್ಥಗಳ ಪ್ರಾತ್ಯಕ್ಷಿಕೆಯ ಪ್ರದರ್ಶನ ನಡೆಯಿತು.
ವಿದ್ಯಾರ್ಥಿಗಳು ಹಣ್ಣಿನ ರಸಗಳ ತಂಪು ಪಾನೀಯಗಳು, ಮಂಡಕ್ಕಿ, ಖಾರಾದಿಂದ ತಯಾರಿಸಿದ ಪದಾರ್ಥಗಳು, ಹಾಲಿನ ಉತ್ಪನ್ನಗಳಾದ ಹಾಲು,ಮಜ್ಜಿಗೆ,ಮೊಸರು, ತುಪ್ಪದಿಂದ ತಯಾರಿಸಿದ ಪದಾರ್ಥಗಳು, ಪಾನೀಯಗಳು, ಸಲಾಡ್,ಹಸಿ ತರಕಾರಿಗಳ ಪಲ್ಯ,ನೆನೆ ಹಾಕಿದ ಕಾಳುಗಳು, ಬೇಕರಿ ಪದಾರ್ಥಗಳಿಂದ ತಯಾರಿಸಿದ ವಿವಿಧ ರೀತಿಯ ಸಿಹಿ ತಿನಿಸುಗಳು, ಹಸಿರು ಸೊಪ್ಪುಗಳ ಬಳಕೆಯ ಆಹಾರ, ಪಾನೀಯಗಳು,ಹೀಗೆ ಇನ್ನಿತರ ಹತ್ತು ಹಲವಾರು ಆಹಾರ ಪದಾರ್ಥಗಳ ಪ್ರದರ್ಶನಗಳ ಜೊತೆ, ಆಹಾರ ತಯಾರಿಸಿದ ವಿಧ್ಯಾರ್ಥಿಗಳು ಅವುಗಳ ತಯಾರಿಕೆಗೆ ಬೇಕಾಗುವ ವಸ್ತುಗಳು, ತಯಾರಿಸುವ ವಿಧಾನಗಳ ಕುರಿತು ವಿವರಣೆಯನ್ನು ವಿವರವಾಗಿ ನೀಡಿದರು.ಸಹ ಶಿಕ್ಷಕರಾದ ಪಕೀರಪ್ಪ ಡಿ, ಗೋಕುಲ್ ಎಸ್., ನವೀನ್ ಶೇಟ್, ಪುರುಷೋತ್ತಮ,ದಿವ್ಯಾ ಮೇಡಂ, ಬಸವರಾಜ, ರಿಯಾ ಸಿಬ್ಬಂದಿ ರವಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಸಹಕಾರ ನೀಡಿದರು.