ಶಿರಸಿ: ಕಿರಿಯರಿಗೆ ಭಜನೆಯನ್ನು ಕಲಿಸುವ ಉದ್ದೇಶವನ್ನು ಇಟ್ಟುಕೊಂಡು ಮನೆಯಲ್ಲಿಯೇ ತರಗತಿಯನ್ನು ಪ್ರಾರಂಭಿಸಿ ಅಂಬಾಗಿರಿಯ ನಿವಾಸಿ ಶೋಭಾ ಸುರೇಶ ಗಮನ ಸೆಳೆದಿದ್ದಾರೆ.
ಶಾಲೆಗೆ ಹೊಗುವ ಹಾಗೂ ಇನ್ನು ಚಿಕ್ಕವರು ಉತ್ತಮ ಸಂಸ್ಕತಿ ಹಾಗೂ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂಬ ಸದುದ್ದೇಶದಿಂದ ಇದನ್ನು ಪ್ರಾರಂಭಿಸಿದ್ದೇನೆ.ಉತ್ತಮ ಪ್ರತಿಕ್ರಿಯೆ ಬಂದಿದೆ. ಬೆಳಗಿನ ಎರಡು ಗಂಟೆ ಇದಕ್ಕಾಗಿಯೇ ಮೀಸಲಾಗಿಟ್ಟಿದ್ದೇನೆ. ಭಜನೆ, ಭಕ್ತಿಗೀತೆಗಳನ್ನು ಕಲಿಯುವುದರಿಂದ ಉತ್ತಮ ಹಾದಿಯಲ್ಲಿ ಹೋಗಲು ನೆರವಾಗಬಹುದು. ಇದರಿಂದ ನೆಮ್ಮದಿಯನ್ನು ಪಡೆಯಲು ಸಾಧ್ಯ. ಈ ತರಗತಿಗಾಗಿ ಯಾವುದೇ ಸಂಭಾವನೆಯನ್ನು ಪಡೆಯುವದಿಲ್ಲ. ಮಕ್ಕಳ ಮನಸ್ಸು ತುಂಬ ಸೂಕ್ಷ್ಮವಾದುದು. ಅದು ಸರಿಯಾಗಿ ಬೆಳೆಯಬೇಕು ಎಂಬುದು ಉದ್ದೇಶವಾಗಿದೆ ಎಂದು ಶೋಭಾ ಅವರು ಮನದುಂಬಿ ವ್ಯಕ್ತಪಡಿಸಿದ್ದಾರೆ.