Slide
Slide
Slide
previous arrow
next arrow

ಕಾಡುಕುರಿ ಬೇಟೆಯಾಡಿದವರ ಮೇಲೆ ಕಾನೂನು ಕ್ರಮ

300x250 AD

ಸಿದ್ದಾಪುರ: ತಾಲೂಕಿನ ಮುಠ್ಠಳ್ಳಿ ಗ್ರಾಮದ ಮನೆಯೊಂದರಲ್ಲಿ ಕಾಡುಕುರಿಯನ್ನು ಕೊಂದು ಮಾಂಸ ತಯಾರಿಸುತ್ತಿರುವಾಗ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆಯವರು ದಸ್ತಗಿರಿ ಮಾಡಿದ್ದಾರೆ.

ಆರೋಪಿಗಳಾದ ವಿನಾಯಕ ಬಡಿಯಾ ಗೌಡ, ಸುರೇಶ ಬಂಗಾರ್ಯ ಗೌಡ ಹಾಗೂ ನಾರಾಯಣ ಈರಾ ಗೌಡ ಇವರ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಂಡಿದ್ದಾರೆ. ಶಿರಸಿ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಅಜ್ಜಯ್ಯ ಜಿ.ಆರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪವಿತ್ರಾ ಯು.ಜೆ ಇವರ ಮಾರ್ಗದರ್ಶನದಲ್ಲಿ ಸಿದ್ದಾಪುರ ಆರ್‌ಎಫ್‌ಒ ಅಜಯಕುಮಾರ ಎಂ.ಎಸ್. ನೇತೃತ್ವದಲ್ಲಿ ನಿಡಗೋಡ ಉಪವಲಯ ಅರಣ್ಯಾಧಿಕಾರಿ ನರೇಂದ್ರನಾಥ ಕದಂ, ವನಪಾಲಕರಾದ ಮುತ್ತಣ್ಣ ಹಿರೇಕಣಗಿ, ಮಾರುತಿ ನಾಯ್ಕ ಮತ್ತು ವೆಂಕಟೇಶ ಪೇಟೆಮಠ ಇವರು ಕಾರ್ಯಾಚರಣೆ ನಡೆಸಿದ್ದರು.

300x250 AD
Share This
300x250 AD
300x250 AD
300x250 AD
Back to top