ಹಳಿಯಾಳ : ಸ್ಥಳೀಯ ಸೇವಾ ಸಹಕಾರಿ ಸಂಘಗಳ ಚುನಾವಣೆ ನಿಮಿತ್ತ ಇಂದು ತಾಲೂಕಿನ ಹವಗಿ – ಕೇರವಾಡ ಗ್ರಾಮದಲ್ಲಿ ಹಳಿಯಾಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಸುನೀಲ್ ಹೆಗಡೆ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀಕಾಂತ ಘೋಟ್ನೇಕರ ಅವರು ಸ್ಥಳೀಯ ರೈತ ಮತದಾರ ಭಾಂದವರ ಪ್ರಚಾರ ಸಭೆ ನಡೆಸಿ, ಮತಯಾಚಿಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕರು ಭಾರತೀಯ ಜನತಾ ಪಾರ್ಟಿ ಸದಾ ರೈತರ ಪರವಾಗಿದೆ. ನರೇಂದ್ರ ಮೋದಿ ಜೀ ಅವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ರೈತರಿಗಾಗಿ ಹಲವಾರು ವಿಭಿನ್ನ ಯೋಜನೆ ಹಾಗೂ ಅನುದಾನಗಳನ್ನು ನೀಡಿದೆ ಎಂದು ತಿಳಿಸಿ ಇದೆ ಬರುವ ಡಿಸೆಂಬರ್ 28 ರಂದು ನಡೆಯಲಿರುವ ಈ ಚುನಾವಣೆಯಲ್ಲಿ ಶ್ರೀಕಾಂತ ಘೋಟ್ನೇಕರ ಅವರಿಗೆ ಹಾಗೂ ಅವರೊಡನೆ ಮುಂತಾದ ವರ್ಗಕ್ಕೆ ಸ್ಪರ್ಧಿಸುತ್ತಿರುವ ಭಾರತೀಯ ಜನತಾ ಪಾರ್ಟಿ ಬೆಂಬಲಿತ ಅಭ್ಯರ್ಥಿಗಳಿಗೆ ಮತವನ್ನು ನೀಡಲು ವಿನಂತಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯರಾದ ಘೋಟ್ನೇಕರ ಅವರು ಮಾತನಾಡಿ ನಾನು ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಜೀ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಈ ಚುನಾವಣೆ ರೈತರ ಚುನಾವಣೆ ಯಾಗಿದ್ದು. ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ. ಜಿಲ್ಲೆಯ ಪ್ರತಿಷ್ಠಿತ ಕೆ.ಡಿ.ಸಿ.ಸಿ ರೈತರಿಗೆ ನೀಡಿದ ಹಲವಾರು ಹಾಗೂ ಮುಂಬರುವ ದಿನಗಳಲ್ಲಿ ನೀಡಲಿರುವ ಸವಲತ್ತುಗಳನ್ನು ರೈತರಿಗೆ ತಿಳಿಸಿ ಅವುಗಳ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿ, ಮತಯಾಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವಾಜಿ ನರಸಾನಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ ಘಟಕಾಂಬಳೆ, ನಗರ ಘಟಕ ಅಧ್ಯಕ್ಷರಾದ ತಾನಾಜಿ ಪಟ್ಟೇಕರ, ಹವಗಿ ಗ್ರಾ.ಪಂ ಉಪಾಧ್ಯಕ್ಷರಾದ ರಾಜು ನಿಂಗನಗೌಡ, ಪ್ರಮುಖರಾದ ಪ್ರಕಾಶ ಕೊರವರ, ಗೋಪಿ ಮೇತ್ರಿ, ಪಾಂಡು ಚಲವಾದಿ, ಮಾರುತಿ ಹಣಬರ, ಹವಗಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಾದ ಮನೋಹರ ಅಂಗ್ರೋಳ್ಳಿ, ತುಳಸಾ ಟೋಸುರ, ಮೊದಲಾದವರು ಉಪಸ್ಥಿತರಿದ್ದರು.