ಹೊನ್ನಾವರ: ಇಂದು ಪ್ರತಿಯೊಬ್ಬರಿಗೂ ಶಿಕ್ಷಣ ಮುಖ್ಯ, ಶಿಕ್ಷಣಕ್ಕೆ ಬೇಕಾಗುವ ಸಹಾಯ, ಸಹಕಾರ ಯಾವತ್ತೂ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಹೇಳಿದರು.
ಅವರು ಪಟ್ಟಣದ ಎಂ.ಪಿ.ಇ ಸೊಸೈಟಿಯ ಸೆಂಟ್ರಲ್ ಸ್ಕೂಲ್ ನ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಸಂಸ್ಥೆಯವರು ಕಾಲೇಜಿನ ರಸ್ತೆ ಬಗ್ಗೆ ಬೇಡಿಕೆ ಇಟ್ಟಿದ್ದಾರೆ. ಅದನ್ನು ಸಹ ಮಾಡಿಕೊಡುತ್ತೇನೆ. ಶಿಕ್ಷಣ ಸಂಸ್ಥೆ ಎಂದರೆ ದೇವಸ್ಥಾನ. ಇಲ್ಲಿ ಯಾವುದಕ್ಕೂ ಕೊರತೆ ಆಗಬಾರದು ಎಂದರು.
ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾಲೇಜಿನ ಪೂರ್ವ ವಿದ್ಯಾರ್ಥಿ,ಉದ್ಯಮಿ ಶರತ್ ನಾಯ್ಕ, ತಮ್ಮ ಕಾಲೀಜಿನ ದಿನಗಳನ್ನು ಸ್ಮರಿಸುತ್ತಾ, ಈ ಸಂಸ್ಥೆಯು ಇಂದು ಆಲದ ಮರವಾಗಿ ಬೆಳೆಸಿದ ಆಡಳಿತ ಮಂಡಳಿಯು ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರಧಾಮವಾಗಿ ಅವರ ಜೀವನವನ್ನು ಸುಗಮಗೊಳಿಸಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಎಂ.ಪಿ.ಇ ಸೊಸೈಟಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಭಟ್ ಮಾತನಾಡಿ ಸಂಸ್ಥೆ ನಡೆಸಬೇಕಾದರೇ ಅದಕ್ಕೆ ಹಣವಿರಬೇಕು. ಹಾಗಾಗಿ ನಾವು ಪೂರ್ವ ವಿದ್ಯಾರ್ಥಿಗಳಿಂದ ಸಹಾಯ ಪಡೆದು ಒಂದು ಹೊಸ ವಿದ್ಯಾಸಂಜೀವಿನಿ ಎನ್ನುವ ಯೊಜನೆಯನ್ನು ರೂಪಿಸಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ ಎಂದರು
ಸಚಿವ ಮಂಕಾಳ ವೈದ್ಯರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್‌ಸಿಯಲ್ಲಿ ಉತ್ತಮ ಅಂಕಗಳಿಸಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಇದೇ ವೇಳೆ ಸನ್ಮಾನಿಸಿ, ಅಭಿನಂಧಿಸಿದರು. ಎಂ.ಪಿ.ಇ ಸೊಸೈಟಿಯ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲೆ ವಿಜಯಲಕ್ಷ್ಮಿ ನಾಯ್ಕ ಹಾಜರಿದ್ದರು.ನಂತರ ಶಾಲಾ ಮಕ್ಕಳಿಂದ ವಿವಿಧ ಮನರಂಜನಾ ಕಾರ್ಯಕಮ ನಡೆಯಿತು.