ಕಾಯಿದೆ ಸಡಲಿಕರಣ ಅವಶ್ಯ: ರವೀಂದ್ರ ನಾಯ್ಕ
ಭಟ್ಕಳ: ಕರ್ನಾಟಕ ಭೂಕಬಳಿಕೆ ನಿಷೇಧ ಕಾಯಿದೆ ಅಡಿಯಲ್ಲಿ ನಗರ ಪ್ರದೇಶದಲ್ಲಿನ ಸರ್ಕಾರಿ ಒಡೆತನದಲ್ಲಿರುವ ಪ್ರದೇಶದ ಒಳಗೆ ಅತಿಕ್ರಮಿಸಿದ್ದಲ್ಲಿ ಭೂಗಳ್ಳರೆಂದು ಪರಿಗಣಿಸಿ ಭೂಕಬಳಿಕೆ ಮಾಡುವುದು ನಿಷೇಧ ಮತ್ತು ಕಾನೂನುಬಾಹಿರ ಎಂದು ಗುರುತಿಸಿ ಶಿಕ್ಷೆಗೆ ಒಳಗಾಗುವ ಸಂಭವವಿದೆ. ಈ ಹಿನ್ನಲೆಯಲ್ಲಿ ಕಾಯಿದೆ ಸಡಲೀಕರಣ ಅವಶ್ಯ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಡಿ.17ರಂದು ಭಟ್ಕಳದಲ್ಲಿ ಅರಣ್ಯವಾಸಿಗಳಿಗೆ ಗ್ರೀನ್ ಕಾರ್ಡ ವಿತರಣೆ ಮಾಡಿ ಅರಣ್ಯವಾಸಿಗಳನ್ನುದ್ದೇಶಿಸಿ ಮಾತನಾಡುತ್ತಾ ಮೇಲಿನಂತೆ ಹೇಳಿದರು.
ಉದ್ದೇಶಿತ ಕಾನೂನಲ್ಲಿ ನಗರ ಪಾಲಿಕೆ ಪರಿಮಿತಿಯಿಂದ 10ಕಿ.ಮೀ ಪರಿಮಿತಿಯೊಳಗಿನ ಭೂಮಿ, ನಗರ ಸಭೆಗಳ ಪರಿಮಿತಿಯಿಂದ 5 ಕಿ.ಮೀ ಒಳಗಿನ ಭೂಮಿ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಪರಿಮಿತಿಯಿಂದ 3 ಕಿಮೀ ಒಳಗಿನ ಸ್ಥಳೀಯ ಪ್ರಾದಿಕಾರಿಗಳ ಮತ್ತು ಸರ್ಕಾರದ ಒಡೆತನದ ನಿಯಂತ್ರಣ ಮತ್ತು ವ್ಯವಸ್ಥಾಪನೆಯಲ್ಲಿರುವ ಭೂಮಿ ಪ್ರದೇಶದಲ್ಲಿ ಮಂಜೂರಿ ಇಲ್ಲದೇ ಅತಿಕ್ರಮಿಸಿದ್ದಲ್ಲಿ ಸಾಗುವಳಿ ಮಾಡಿದ ಸಾಗುವಳಿದಾರನ್ನು ವಿರುದ್ಧ ಕ್ರಿಮಿನಲ್ ಪ್ರಕರಣ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ದಾಖಲಿಸಲ್ಪಡುವದು ಎಂದು ಕಾನೂನಿನಲ್ಲಿ ಉಲ್ಲೇಖಿಸಲ್ಪಟ್ಟಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ದೇವರಾಜ ಗೊಂಡ, ಪಾಂಡುರಂಗ ನಾಯ್ಕ ಬೆಳಕೆ, ಚಂದ್ರು ನಾಯ್ಕ ಬೆಳಕೆ, ಶಬ್ಬೀರ್ ಸಾಬ ಭಟ್ಕಳ, ಚಂದ್ರು ನಾಯ್ಕ ಗೊರಟೆ, ದಯಾನಂದ ಹಸರವಳ್ಳಿ, ನಾಗರಾಜ ಹಸರವಳ್ಳಿ, ಸಂತೋಷ ಗೊರಟೆ, ಕಯ್ಯುಮ ಕೋಲಾ ಭಟ್ಕಳ, ರತ್ನಾ ಬೆಳಕೆ, ಮಾದೇವಿ ಕರಿಕಲ್ ಉಪಸ್ಥಿತರಿದ್ದರು.
3 ವರ್ಷ ಜೈಲು 25 ಸಾವಿರ ದಂಡ:
ಭೂಕಬಳಿಕೆ ನಿಷೇಧ ಕಾಯಿದೆ ಅಡಿಯಲ್ಲಿ ದಾಖಲಿಸುವ ಕ್ರಿಮಿನಲ್ ಪ್ರಕರಣದಲ್ಲಿ 3 ವರ್ಷದವರಿಗೂ ಜೈಲು ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸುವ ಶಿಕ್ಷೆಯ ಅಂಶ ಕಾನೂನಿನಲ್ಲಿ ಉಲ್ಲೇಖಿಸಲ್ಪಟ್ಟಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.