ಶಿರಸಿ: ನಾಟ್ಯಾಂಜಲಿ ನೃತ್ಯ ಕಲಾಕೇಂದ್ರ ವತಿಯಿಂದ ಇಂದು, ಬುಧವಾರ ಸಂಜೆ 6ಗಂಟೆಗೆ ತಾಲೂಕಿನ ಗೋಳಿಯ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ವಿ. ಸಹನಾ ಭಟ್ ಹಾಗೂ ಸಂಗಡಿಗರು ಭರತನಾಟ್ಯ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು, ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಘಟಕರು ಕೋರಿದ್ದಾರೆ.