ಶಿರಸಿ: ಯಲ್ಲಾಪುರದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ರಂಗೋಲಿ ಸ್ಪರ್ಧೆಯಲ್ಲಿ ತಾಲೂಕಿನ ವಾನಳ್ಳಿಯ ಗಜಾನನ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿ ಪೂರ್ಣ ದತ್ತಾತ್ರೇಯ ವೈದ್ಯ ಕಕ್ಕಳ್ಳಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಅದಿತಿ ವಸಂತ ಹೆಗಡೆ ತ್ಯಾಗಲಿ ಕನ್ನಡ ಕಾವ್ಯ ವಾಚನದಲ್ಲಿ ದ್ವಿತೀಯ ಹಾಗೂ ಪ್ರಜ್ಞಾ ಗಣಪತಿ ಭಟ್ಟ ಕಣ್ಣಿಮನೆ ಮತ್ತು ಸಂಕೇತ ಶ್ರೀಪಾದ ಹೆಗಡೆ ಕಾಳಿಮನೆ ರಸಪ್ರಶ್ನೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದು, ಈ ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಶಿಕ್ಷಕರು, ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ.