ಹೊನ್ನಾವರ : ತಾಲೂಕಿನ ಸಂತೆಗುಳಿ ಹತ್ತಿರ ಬುಧವಾರ ಸಂಜೆ ಮತ್ತೆ ಚಿರತೆ ದಾಳಿ ನಡೆಸಿದ್ದು, ಬೈಕ್ ಸವಾರನ ಕಾಲಿಗೆ ಪರಚಿ ಗಾಯಗೊಳಿಸಿದೆ.
ಹೊಸಾಕುಳಿ ಗ್ರಾಮದ ವಿಲಾಯ್ತಿಯ ರವಿ ಶಂಭು ಹೆಗಡೆ ಇವರು ಚಿರತೆ ದಾಳಿಗೆ ಒಳಗಾದವರಾಗಿದ್ದಾರೆ. ಸಂತೆಗುಳಿ ಹೊನ್ನಾವರ ಮಾರ್ಗವಾಗಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಮೈಮೇಲೆ ಹಾರಿ ಚಿರತೆ ದಾಳಿ ಮಾಡಿದೆ. ಅದೃಷ್ಟವಶಾತ್ ಕಾಲಿಗೆ ಪೆಟ್ಟಾಗಿ, ಜೀವಪಾಯದಿಂದ ಪಾರಾಗಿದ್ದಾರೆ.
ಬುಧವಾರ ಬೆಳಿಗ್ಗೆ ಕೂಡ ಸತ್ಯನಾರಾಯಣ ಹೆಗಡೆ ಇವರ ಮೇಲೆ ದಾಳಿ ಮಾಡಿ ಬೈಕ್ ಸೀಟ್ ಕವರ್ ಹರಿದಿತ್ತು. ಇದರ ನಡುವೆ ಸಂಜೆ ಮತ್ತೆ ದಾಳಿ ನಡೆಸಿದೆ. ಸ್ಥಳೀಯ ಸಾರ್ವಜನಿಕರು ಭಯದಿಂದಲೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.