ದಾಂಡೇಲಿ : ನಗರದ ಅಂಬೇವಾಡಿಯಲ್ಲಿ ಜಿ+2 ಆಶ್ರಯಮನೆಗಳ ನಿರ್ಮಾಣ ಕಾಮಗಾರಿಯ ಪರಿಶೀಲನೆಗೆ ಕರ್ನಾಟಕ ಗೃಹ ಮಂಡಳಿಯ ಆಯುಕ್ತರಾದ ಕವಿತಾ ಮನ್ನಿಕೇರಿಯವರು ಡಿಸೆಂಬರ್ 11ರಂದು ಬಂದಿರುವಂತಹ ಸಂದರ್ಭದಲ್ಲಿ ಆಶ್ರಯ ಸಮಿತಿಯ ಸದಸ್ಯರಿಗೆ ಯಾವುದೇ ಮಾಹಿತಿಯನ್ನು ನೀಡದೆ ಕಡೆಗಣಿಸಿರುವುದಕ್ಕೆ ಆಶ್ರಯ ಸಮಿತಿಯ ಸದಸ್ಯರಾದ ಪ್ರಭುದಾಸ ಯೆನಿಬೇರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅವರು ಗುರುವಾರ ನಗರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಆಶ್ರಯ ಸಮಿತಿಯ ಸದಸ್ಯರನ್ನು ಇಂತಹ ಸಂದರ್ಭದಲ್ಲಿ ಕಡೆಗಣಿಸುವುದು ಸರಿಯಾದ ಕ್ರಮವಲ್ಲ ಎಂದು ನಗರಾಡಳಿತದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.