Slide
Slide
Slide
previous arrow
next arrow

ರೋಟರಿ ಕ್ಲಬ್ ವತಿಯಿಂದ ಶಾಲೆಗಳಿಗೆ ಬೆಂಚ್ – ಡೆಸ್ಕ್ ವಿತರಣೆ

300x250 AD

ದಾಂಡೇಲಿ : ರೋಟರಿ ಕ್ಲಬ್ ವತಿಯಿಂದ ನಗರದ ಮೂರು ಅನುದಾನಿತ ಶಾಲೆಗಳಿಗೆ ಅಂದಾಜು ರೂ.8 ಲಕ್ಷ‌ ಸಹಾಯ ಧನದಡಿ ಬೆಂಚ್ ಡೆಸ್ಕ್‌ಗಳನ್ನು ಗುರುವಾರ ವಿತರಿಸಲಾಯಿತು.

ನಗರದ ರೋಟರಿ ಶಾಲೆಗೆ 51, ಕನ್ಯಾ ವಿದ್ಯಾಲಯಕ್ಕೆ 20 ಮತ್ತು ನಗರದ ಜನತಾ ವಿದ್ಯಾಲಯಕ್ಕೆ 170 ಹೀಗೆ ಒಟ್ಟು 241 ಬೆಂಚ್ ಡೆಸ್ಕ್ ಗಳನ್ನು ರೂ.8 ಲಕ್ಷ ಸಹಾಯ ಧನದಡಿ ವಿತರಿಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ರೋಟರಿ ಜಿಲ್ಲಾ ಪ್ರಾಂತಪಾಲರಾದ ಶರದ್ ಪೈ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಕ್ಕೆ ರೋಟರಿ ಸಂಸ್ಥೆ ಮೊದಲ ಆದ್ಯತೆ ಅಡಿ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ಶಿಕ್ಷಣ ಕ್ಷೇತ್ರ ಸದೃಢಗೊಂಡಾಗ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ ವಿವಿಧ ಸ್ತರಗಳಲ್ಲಿ ರೋಟರಿ ಸಂಸ್ಥೆ ಕೊಡುಗೆ ಹಾಗೂ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ದಾಂಡೇಲಿಯ ರೋಟರಿ ಕ್ಲಬ್ ಅತ್ಯುತ್ತಮ ಜನಪರ ಕಾರ್ಯ ಚಟುವಟಿಕೆಗಳ ಮೂಲಕ ಮಾದರಿಯಾಗಿದೆ ಎಂದರು.

300x250 AD

ರೋಟರಿ ಕ್ಲಬ್ಬಿನ ಜಿಲ್ಲಾ ಸಹಾಯಕ ಪ್ರಾಂತಪಾಲರಾದ ಡಾ.ಆನಂದ ತಾವರಗೆರೆ ಅವರು ರೋಟರಿ ಸಂಸ್ಥೆ ಸ್ಪಷ್ಟ ಉದ್ದೇಶವನ್ನಿಟ್ಟುಕೊಂಡು ಸದೃಢ ಸಮಾಜ ನಿರ್ಮಾಣಕ್ಕೆ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದರು.

ಈ ಸಂದರ್ಭದಲ್ಲಿ ದಾಂಡೇಲಿಯ ರೋಟರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಮೋಹನ‌ ಪಾಟೀಲ್, ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ರಾಹುಲ್ ಬಾವಾಜಿ, ಪ್ರಧಾನ ಕಾರ್ಯದರ್ಶಿ ಅಶುತೋಷ ಕುಮಾರ್ ರಾಯ್, ಖಜಾಂಚಿ ಲಿಯೋ ಪಿಂಟೋ, ರೋಟರಿ ಕ್ಲಬ್ಬಿನ ಪ್ರಮುಖರುಗಳಾದ ಎಚ್.ವೈ.ಮೆರ್ವಾಡೆ, ಪ್ರಕಾಶ ಶೆಟ್ಟಿ, ಆರ್.ಪಿ.ನಾಯ್ಕ, ಸುಧಾಕರ ಶೆಟ್ಟಿ, ಎಸ್.ಜಿ.ಬಿರದಾರ, ಪಿ.ವಿ.ಹೆಗಡೆ, ಇಮಾಮ್ ಸರ್ವರ, ನಾಗೇಶ ನಾಯ್ಕವಾಡಿ, ಡಾ. ಎಸ್.ಎನ್.ದಫೇದಾರ್, ಡಾ.ಅನೂಪ್ ಮಾಡ್ದೋಳ್ಕರ, ಶೇಖರ ಪೂಜಾರಿ, ಡಾ.ಪರಶುರಾಮ‌ ಸಾಂಬ್ರೇಕರ, ಝೇವಿಯರ್ ಡಿಸಿಲ್ವಾ, ಡಾ.ಸುಮಿತ್ ಅಗ್ನಿಹೋತ್ರಿ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top