ಸಿದ್ದಾಪುರ : ತಾಲ್ಲೂಕಿನ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವ ಹಿರಿಯ ಸಾಹಿತಿಗಳು, ನಿವೃತ್ತ ಶಿಕ್ಷಕರೂ ರಾಷ್ಟ್ರ ಪ್ರಶಸ್ತಿ ಪಡೆದ ಜಿ.ಜಿ. ಹೆಗಡೆ ಬಾಳಗೋಡ್ ಹಾಗೂ ಪತ್ನಿ ಸ್ವರ್ಣಲತಾ ಶಾನಬಾಗ ಇವರಿಗೆ ಸಾಹಿತ್ಯ ಪರಿಷತ್ತಿನ ಸಂಪ್ರದಾಯದಂತೆ ಅವರ ಮನೆಗೆ ಭೇಟಿ ನೀಡಿ ಆಹ್ವಾನ ನೀಡಲಾಯಿತು.
ಸಾಹಿತ್ಯ ಪರಿಷತ್ತಿನ ವತಿಯಿಂದ ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ,ಕಾರ್ಯದರ್ಶಿಗಳಾದ ಅಣ್ಣಪ್ಪ ಶಿರಳಗಿ, ಪ್ರಶಾಂತ ಶೇಟ್, ಕೋಶಾಧ್ಯಕ್ಷ ಪಿ.ಬಿ. ಹೊಸೂರ ನಿಕಟಪೂರ್ವ ಅಧ್ಯಕ್ಷರಾದ , ನಾಗರಾಜ ಮಾಳ್ಕೋಡ, ,ಮಾಜಿ ಅಧ್ಯಕ್ಷ ಎಮ್.ಕೆ. ನಾಯ್ಕ ಹೊಸಳ್ಳಿ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ರತ್ನಾಕರ ಜಿ. ನಾಯ್ಕ ನರಮುಂಡಿಗೆ, ಸಿ.ಎಸ್. ಗೌಡರ, ಪ್ರಶಾಂತ ಹೆಗಡೆ, ಉಪಸ್ಥಿತರಿದ್ದರು.