ಶಿರಸಿ: ಶಿರಸಿ ತಾಲೂಕಾ ಮಡಿವಾಳ ಸಮಾಜದ ಮಾಚಿದೇವ ಸಮುದಾಯ ಭವನದ ಕಟ್ಟಡ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಸರ್ವಸಾಧಾರಣ ಸಭೆಯು ಫೆ.1, 2025ರಂದು ಜರುಗಲಿದೆ. ಅಂದು ಶನಿವಾರ ಮುಂಜಾನೆ 8.30 ಘಂಟೆಗೆ ಶ್ರೀ ಮಾರಿಕಾಂಬಾ ದೇವಿಯ ಪೂಜೆಯೊಂದಿಗೆ ಭವ್ಯ ಮೆರವಣಿಗೆಯು ಪ್ರಾರಂಭವಾಗಿ 10 ಘಂಟೆಗೆ ಶಾಸಕರಾದ ಭೀಮಣ್ಣ ಟಿ. ನಾಯ್ಕ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಇವರ ಗೌರವ ಉಪಸ್ಥಿತಿಯೊಂದಿಗೆ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ. ಈ ಸುಸಂದರ್ಭದಲ್ಲಿ ಮಡಿವಾಳ ಸಮಾಜ ಸಂಘದ ಸದಸ್ಯತ್ವ ಹೊಂದಿರುವ ಪಾಲಕರ ಪ್ರತಿಭಾನ್ವಿತ ಮಕ್ಕಳನ್ನು ಪುರಸ್ಕರಿಸಲಾಗುವುದು. SSLC ಯಲ್ಲಿ 90% ಹಾಗೂ ಹೆಚ್ಚುವರಿ, P.U.C ಯಲ್ಲಿ 85% ಹಾಗೂ ಹೆಚ್ಚುವರಿ ಮತ್ತು ಪದವಿಯ ಅಂತಿಮ ಪರೀಕ್ಷೆಯನ್ನು ಒಳಗೊಂಡು ಎಲ್ಲಾ ಸೆಮಿಸ್ಟರ್‌ಗಳ ಸರಾಸರಿ (B.A, B.SC, B.COM) ಯಲ್ಲಿ 80% ಹಾಗೂ ಹೆಚ್ಚುವರಿ ಅಂಕವನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಇವರುಗಳ ಅಂಕಪಟ್ಟಿಗಳನ್ನು ಪ್ರಧಾನ ಕಾರ್ಯದರ್ಶಿಯವರಾದ ಮೋಹನ ಮಡಿವಾಳ (ಮೊ:9620325494) ಇವರಿಗೆ ದಿನಾಂಕ: 15-01-2025 ರ ಮುಂಚಿತವಾಗಿ ತಲುಪಿಸಲು ಕೋರಿದೆ.