Slide
Slide
Slide
previous arrow
next arrow

ಎಂಎಂ ಮಹಾವಿದ್ಯಾಲಯ ಎನ್‌ಸಿಸಿ ಕೆಡೆಟ್‌ಗಳ ಸಾಧನೆ

300x250 AD

ಶಿರಸಿ: ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್‌ಸಿಸಿ ಘಟಕದ ಕೆಡೆಟ್‌ಗಳು ನವೆಂಬರ್ 16 ರಿಂದ 26ರ ವರೆಗೆ ಕಾರವಾರದಲ್ಲಿ ನಡೆದ ವಾರ್ಷಿಕ ತರಬೇತಿ ಶಿಬಿರದಲ್ಲಿ 59 ವಿದ್ಯಾರ್ಥಿಗಳು ಭಾಗಿಯಾಗಿದ್ದು, ಅದರಲ್ಲಿ ಬೆಸ್ಟ್ ಕೆಡೆಟ್- ಎಸ್ ಯು ಓ ನಿಖಿಲ್ ವರ್ಣೇಕರ್, ಕ್ವಾರ್ಟರ್ ಗಾರ್ಡನಲ್ಲಿ- ಎಸ್ ಯು ಓ ಸುದೀಪ್ ಮಾಳಿ, ಜೆಯುಓ ಸಂದೇಶ್ ನಾಯ್ಕ್, ಜೆಯುಓ ಸಹನಾ ಮಡಿವಾಳ್, ಸಿಕ್ಯೂಎಂಎಸ್ ಸುಮಂತ ನಾಯ್ಕ, ಎಸ್‌ಜಿಟಿ ಪವನ್ ನಾಯ್ಕ್, ಎಸ್‌ಜಿಟಿ ಕೀರ್ತಿ ನಾಯ್ಕ್ ಮತ್ತು ಡೆಮೋ ಟೀಮ್ ನಲ್ಲಿ ಎಸ್‌ಜಿಟಿ ರಜತ್ ನಾಯ್ಕ, ಎಲ್‌ಸಿಪಿ ಎಲ್ ತಿಲಕ್ ನಾಯ್ಕ ಹಾಗೂ ಬೇನೆಟ್ ಟೀಮ್‌ನಲ್ಲಿ ಎಸ್‌ಯುಓ ನಿಖಿಲ್ ವರ್ಣೇಕರ್, ಕೆಡೆಟ್ ಸಂಜಯ್ ಸಿದ್ದಿ, ಕೆಡೆಟ್ ಆನಂದ ಕಿಚಡಿ ಮತ್ತು  ಫ್ಲಾಗ್ ಏರಿಯಾ ದಲ್ಲಿ ಸಿಪಿಎಲ್ ಪವಿತ್ರಾ ಬಡಿಗೇರ್, ಎಲ್‌ಸಿಪಿ ಎಲ್ ಮಧುರ ಅರ್ಕಸಾಲಿ, ಎಲ್‌ಸಿಪಿಎಲ್ ವೆಂಕಟೇಶ್ ವಡ್ಡರ, ಎಲ್‌ಸಿಪಿಎಲ್ ಧನಶ್ರೀ ಪಾಟ್ನೆಕರ್, ಕೆಡೆಟ್ ಅರ್ಚನಾ ಪಿ ಪದಕ ಗಳಿಸಿದ್ದಾರೆ. ಸಾಂಸ್ಕೃತಿಕ ವಿಭಾಗದಲ್ಲಿ ಕಾಲೇಜು ಪ್ರಥಮ ಸ್ಥಾನ ಹಾಗೂ ಹಗ್ಗ ಜಗ್ಗಾಟದಲ್ಲಿ ಪ್ರಥಮ ಸ್ಥಾನ, ಥ್ರೋ ಬಾಲ್ ದ್ವಿತೀಯ ಸ್ಥಾನ ವಾಲಿಬಾಲ್ ತೃತೀಯ ಸ್ಥಾನ ಹಾಗೂ ಒಟ್ಟಾರೆ ಉತ್ತಮ ಕಾಲೇಜು ವಿಭಾಗದಲ್ಲಿ ದ್ವಿತೀಯ ಸ್ಥಾನ ಹೊಂದಿದ್ದು ಇವರಿಗೆ ಎನ್‌ಸಿಸಿ ಅಧಿಕಾರಿ ಪ್ರೊ. ರಾಘವೇಂದ್ರ ಹೆಗಡೆ ಮಾರ್ಗದರ್ಶನ ನೀಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಎಂಇಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಕಾಲೇಜು ಉಪಸಮಿತಿ ಅಧ್ಯಕ್ಷ ಎಸ್.ಕೆ.ಭಾಗವತ್, ಸಂಸ್ಥೆಯ ಪದಾಧಿಕಾರಿಗಳು, ಪ್ರಾಚಾರ್ಯ ಪ್ರೊ.ಜಿ.ಟಿ.ಭಟ್ ಬೋಧಕ, ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top