ಭಟ್ಕಳ: ಮುರುಡೇಶ್ವರ ಸಮೀಪ ಚಲಿಸುತ್ತಿದ್ದ ರೈಲಿನಿಂದ ಬಿದ್ದ ಬಾಲಕಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಬಾಲಕಿಯನ್ನು ರಾಜಸ್ಥಾನದ ಗಂಗಾಪುರ ಸಿಟಿ ಮೂಲದ ಅಲ್ಜಿಯಾಬಾನು ಸುಲೇಮಾನ್ ಖಾನ್ ಎಂದು ತಿಳಿದುಬಂದಿದೆ. ಈಕೆ ತನ್ನ ತಂದೆ ತಾಯಿಯೊಂದಿಗೆ ರಾಜಸ್ಥಾನದ ಕೋಟ ಜಂಕ್ಷನನಿಂದ ಕೇರಳ ರಾಜ್ಯದ ಕಣ್ಣೂರಿಗೆ ಅಮೃತಸರ್ ಕುಚೇವೆಲ್ಲಿ ಸೂಪರ್ ಫಾಸ್ಟ್ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ನವೆಂಬರ 25 ರಾತ್ರಿ 9 ಗಂಟೆ ಸುಮಾರಿಗೆ ಮುಡೇಶ್ವರ ಹತ್ತಿರ ಚಲಿಸುವ ಟ್ರೈನಿನಿಂದ ಬಿದ್ದ ಬಾಲಕ್ಕಿಯ ತಲೆಗೆ ಗಂಭೀರವಾಗಿ ಗಾಯವಾಗಿದ್ದು ತಕ್ಷಣ ಆಕೆಯನ್ನು ಮುರುಡೇಶ್ವರ ಆರ್ಎನ್ಎಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಸಾಗಿಸಿದ್ದು ಬಳಿಕ ಅಲ್ಲಿಂದ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಾವನ್ನಪ್ಪಿದ್ದಾಳೆ