ಸಿದ್ದಾಪುರ:- ತಾಲೂಕಿನ ನಿಲ್ಕುಂದದ ವೀರಭದ್ರ ದೇವಾಲಯದ ದೀಪೋತ್ಸವದ ಪ್ರಯುಕ್ತ ಹೆಗ್ಗರಣಿಯ ವೀರಮಾರುತಿ ಕದಂಬೇಶ್ವರ ಯಕ್ಷಗಾನ ಮಂಡಳಿಯ ಕಲಾವಿದರಿಂದ ಏರ್ಪಡಿಸಲಾದ ದಕ್ಷಯಜ್ಞ ಆಖ್ಯಾನ ಬಹುಸಂಖ್ಯೆಯಲ್ಲಿ ಸೇರಿದ ಪ್ರೇಕ್ಷಕರ ಚಿತ್ತಾಕರ್ಷಿಸಿತು.
ಈಶ್ವರನ ಪಾತ್ರದ ನಾಟ್ಯಾಚಾರ್ಯ ಶಂಕರ ಭಟ್ಟರ ಶಿವ ತಾಂಡವ ನೃತ್ಯ ವಿಶೇಷ ಆಕರ್ಷಣೆಯಾಯಿತು. ಅದರಂತೆಯೇ ರಘುಪತಿ ನಾಯ್ಕರ ದಕ್ಷ, ಮಂಜು ನಾಯ್ಕ, ಕೋನಳ್ಳಿಯವರ ದಾಕ್ಷಾಯಣಿ, ಶ್ರೀವತ್ಸ ನೆಬ್ಬೂರುರವರ ವೀರಭದ್ರ, ವಿನಾಯಕ ಮಾವಿನಕಟ್ಟಾರವರ ದೇವೇಂದ್ರ, ಮಾರ್ಷಲ್ ಮೂರೂರ್ ರವರ ಅಗ್ನಿ, ಗಣೇಶ ಹೆಗ್ಗರಣಿ ಇವರ ವಾಯು, ವೆಂಕಟ್ರಮಣ ಹೆಗಡೆ, ಮಾದ್ನಕಲ್ ರವರ ಬ್ರಾಹ್ಮಣ ಭೃಗು, ಶಂಕರಮೂರ್ತಿಯವರ ವಟು, ಛಾಯಾ ಹೆಗ್ಗರಣಿಯವರ ವೀರಣಿ, ನಯನಮನೋಹರವಾಗಿ ಆಭಿವ್ಯಕ್ತಿಸಲ್ಪಟ್ಟವು. ಹಿಮ್ಮೇಳದಲ್ಲಿ ಭಾಗವತರಾಗಿ ಎಂ. ಪಿ. ಹೆಗಡೆ, ಹುಲ್ಲಾಳಗದ್ದೆ, ಗಣಪತಿ ಹೆಗಡೆ, ಮೂರೂರು, ಮದ್ದಲೆ ವಾದಕರಾಗಿ ವಿಠಲ ಪೂಜಾರಿ, ಮಂಚೀಕೇರಿ, ಚಂಡೆ ವಾದಕರಾಗಿ ಗಂಗಾಧರ ಹೆಗಡೆ, ಕಂಚೀಮನೆ, ಕಾರ್ಯಕ್ರಮಕ್ಕೆ ಕಳೆಯೇರಿಸಿದರು. ರಘುಪತಿನಾಯ್ಕರ ಹರಕೆ ಆಟ ಇದಾಗಿದ್ದು ಅವರು ಕಲಾವಿದರನ್ನು ಗೌರವಿಸಿದರು.