ಸಿದ್ದಾಪುರ: ತಾಲೂಕಿನ ಕೋಲಸಿರ್ಸಿ ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ ಶುಕ್ರವಾರ 2025-26ನೇ ಸಾಲಿನ ನರೇಗಾ ಕಾರ್ಮಿಕ ಆಯವ್ಯಯ ತಯಾರಿಕೆ ನಿಮಿತ್ತ “ನರೇಗಾ ನಡಿಗೆ ಸುಸ್ಥಿರತೆಯಡೆಗೆ” ಅಭಿಯಾನದಡಿ ‘ರೋಜಗಾರ ದಿವಸ್’ ಆಚರಿಸಲಾಯಿತು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗುಡ್ಡೆಕೇರಿಯಿಂದ ಹಿತ್ಲಕೈ ವರೆಗೆ ಕೈಗೊಂಡಿರುವ ಕಚ್ಚಾ ರಸ್ತೆ ದುರಿಸ್ಥಿ ಕಾಮಗಾರಿ ಸ್ಥಳದಲ್ಲಿ ಸೇರಿರುವ ಕೂಲಿಕಾರರಿಗೆ ಉದ್ಯೋಗ ಖಾತರಿ ಯೋಜನೆಯಡಿ ಸಿಗುವ ವೈಯಕ್ತಿಕ ಹಾಗೂ ಸಾಮುದಾಯಿಕ ಕಾಮಗಾರಿ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವವರು ನ. 30 ರೊಳಗಾಗಿ ಗ್ರಾಮ ಪಂಚಾಯತ್ನಲ್ಲಿ ಕಾಮಗಾರಿ ಬೇಡಿಕೆ ಅರ್ಜಿಗಳನ್ನು ನೀಡಬಹುದಾಗಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಬ್ರಹ್ಮಣ್ಯ ಹೆಗಡೆ ತಿಳಿಸಿದರು.
ನರೇಗಾದಡಿ 349ರೂ ಕೂಲಿಯೊಂದಿಗೆ ಕುಟುಂಬವೊಂದಕ್ಕೆ 100 ದಿನಗಳ ಕೆಲಸ. ಕುಟುಂಬವೊಂದು ಜೀವಿತಾವಧಿಗೆ ವೈಯಕ್ತಿಕ ಕಾಮಗಾರಿಗಳಿಗೆ 5 ಲಕ್ಷದವರೆಗೆ ಸಹಾಯಧನ ಪಡೆಯಬಹುದಾಗಿದೆ. ಇನ್ನೂ ರೈತರು ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ ಕೃಷಿ ಹೊಂಡ, ಕೃಷಿ ಬಾವಿ, ಬದು ನಿರ್ಮಾಣ, ಇಂಗುಗುಂಡಿ ಇತ್ಯಾದಿ ಕೃಷಿ ಮತ್ತು ತೋಟಗಾರಿಕಾ ಇಲಾಖೆಯಡಿಯೂ ಸಹ ಸಾಕಷ್ಟು ಕಾಮಗಾರಿಗಳನ್ನು ಪಡೆಯಬಹುದಾಗಿದೆ ಎಂದು ತಾಲೂಕು ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.