ರಂಗಧಾಮದಲ್ಲಿ ರಂಗೇರಲಿದೆ ‘ನಾದ-ನೃತ್ಯೋಪಾಸನಂ’, ‘ನಾದೋಪಾಸನಂ’
ಶಿರಸಿ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ತ್ರಯಿ ಕಲಾ ಸಂಸ್ಥೆ (ರಿ.) ಬೆಂಗಳೂರು
ಆನೂರು ಅನಂತಕೃಷ್ಣ ಶರ್ಮ ಪೌಂಡೇಶನ್ ಫಾರ್ ಮ್ಯೂಸಿಕ್ (ರಿ.) ಇವರ ಸಹಯೋಗದಲ್ಲಿ ರಾಷ್ಟ್ರೀಯ & ಅಂತಾರಾಷ್ಟ್ರೀಯ ಮಟ್ಟದ ಕಲಾವಿದರ ಕಾರ್ಯಕ್ರಮವನ್ನು ಅ.19, ಹಾಗೂ 20 ರಂದು ನಗರದ ರಂಗಧಾಮ ವೇದಿಕೆಯಲ್ಲಿ ಆಯೋಜಿಸಲಾಗಿದೆ.
ಅ.19, ಶನಿವಾರ ಸಂಜೆ 4.30ಕ್ಕೆ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಶುಭಾ ಧನಂಜಯ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ರಿಜಿಸ್ಟ್ರಾರ್ ನರೇಂದ್ರ ಬಾಬು ಎನ್.,ಅಂತರಾಷ್ಟ್ರೀಯ ಕಲಾವಿದ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ,ತ್ರಯಿ ಕಲಾ ಸಂಸ್ಥೆ,ಬೆಂಗಳೂರು ನಿರ್ದೇಶಕಿ ಶ್ರೀಮತಿ ಅಕ್ಷತಾ ಜೋಶಿ, ಪ್ರಖ್ಯಾತ ಭರತನಾಟ್ಯ ಕಲಾವಿದೆ ಶ್ರೀಮತಿ ಸೀಮಾ ಭಾಗ್ವತ್ ಉಪಸ್ಥಿತರಿರಲಿದ್ದರೆ.
ಇಳಿಸಂಜೆ 5 ಘಂಟೆಯಿಂದ ನಾಟ್ಯದೀಪ ಕಲ್ಬರಲ್ ಟೀಮ್ ಇವರಿಂದ ಗುರು ಶ್ರೀಮತಿ ಸೀಮಾ ಭಾಗ್ವತ್ ಮತ್ತು ಶ್ರೀಮತಿ ದೀಪಾ ಭಾಗ್ವತ್ ನಿರ್ದೇಶನದಲ್ಲಿ “ಪಾವನಪಾದ” ಎನ್ನುವ ಭರತನಾಟ್ಯ ನೃತ್ಯರೂಪಕ ನಡೆಯಲಿದೆ. ಸಂಜೆ 6 ಘಂಟೆಯಿಂದ ಕರ್ನಾಟಕ ಕಲಾಶ್ರೀ ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮರವರ ನಿರ್ದೇಶನದಲ್ಲಿ “ಲಯ – ಲಾವಣ್ಯ” ಕಾರ್ಯಕ್ರಮ ಜರುಗಲಿದ್ದು, ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮ- ಮೃದಂಗ, ವಿದ್ವಾನ್ ತಿರುಮಲೆ ಗೋಪಿ ಶ್ರವಣ – ಡ್ರಮ್ಸ್, ವಿದ್ವಾನ್ ಪ್ರಬೋಥ್ ಶ್ಯಾಮ – ಪಾಜ್, ವಿದ್ವಾನ್ ಅಮಿತ್ ನಾಡಿಗ್ – ಕೊಳಲು, ವಿದ್ವಾನ್ ಸುದತ್ತ ಎಲ್. ಎಸ್. – ತಬಲಾ, ವಿದ್ವಾನ್ ಕೆ.ಜೆ.ದಿಲಿಪ್ – ಪಿಟೀಲು, ವಿದ್ವಾನ್ ಸುನಾದ ಆನೂರ್ – ಖಂಜಿರಾ, ವಿದ್ವಾನ್ ಸೋಮಶೇಖರ್ ಜೋಯಿಸ್ ಬಿ.ಆರ್ – ಕೊನ್ನಕೋಲ್, ವಿದ್ವಾನ್ ಫಣೀಂದ್ರ ಎನ್. – ಘಟಂ, ವಿದ್ವಾನ್ ಚಿದಾನಂದ – ಮೋರ್ಚಿಂಗ್, ವಿದ್ವಾನ್ ವಿದ್ಯಾಶಂಕರ್ ಎನ್. – ಡೋಲು,ವಿದ್ವಾನ್ ವಿನೋದ್ ಶ್ಯಾಮ ಅನೂರ್ – ತಬಲಾ ಮತ್ತು ಇತರ ವಾದ್ಯಗಳಲ್ಲಿ ಪ್ರಖ್ಯಾತ ಕಲಾವಿದರುಗಳು ಭಾಗವಹಿಸಲಿದ್ದಾರೆ.
ಅ.20,ಭಾನುವಾರ ಸಂಜೆ 4.45ರಿಂದ ಕುಮಾರ ಪೃಥ್ವಿರಾಜ ನಾರಾಯಣ ಕುಲಕರ್ಣಿ ಇವರಿಂದ ಬಾನ್ಸುರಿ ವಾದನ, ಇವರಿಗೆ ತಬಲಾದಲ್ಲಿ ನಾಗರಾಜ ಹೆಗಡೆ, ಬೆಂಗಳೂರು ಸಾಥ್ ನೀಡಲಿದ್ದಾರೆ. ಸಂಜೆ 5.30 ರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಅಂತರಾಷ್ಟ್ರೀಯ ಹಿಂದೂಸ್ತಾನಿ ಸಂಗೀತ ಕಲಾವಿದ ಪಂ|| ಶೌನಕ್ ಅಭಿಷೇಕೀ, ಮುಂಬೈ, ಶ್ರೀಮತಿ ಮೇಧಾ ಭಟ್ಟ, ಅಗ್ಗೇರೆ ಭಾಗವಹಿಸಲಿದ್ದು, ಸಂವಾದಿನಿಯಲ್ಲಿ ಪಂ|| ಸುಧಾಂಶು ಕುಲಕರ್ಣಿ, ಬೆಳಗಾವಿ, ತಬಲಾದಲ್ಲಿ ಪಂ|| ಉದಯ ಕುಲಕರ್ಣಿ, ಗೋವಾ, ಮಂಜೀರಾದಲ್ಲಿ ಅನಂತಮೂರ್ತಿ ಮತ್ತೀಘಟ್ಟ ಸಾಥ್ ನೀಡಲಿದ್ದಾರೆ.