ಕುಮಟಾ: ತಾಲೂಕಿನ ಹೆಗಡೆ ಗ್ರಾಮದಲ್ಲಿ ಗೋಕಳ್ಳತನದ ಬಗ್ಗೆ ಹೇಳಿದ್ದು, ಗೋಕಳ್ಳತನ ಮತ್ತು ಅಕ್ರಮ ಗೋಸಾಗಾಟ ತಡೆಗೆ ಕ್ರಮ ವಹಿಸುತ್ತಿದ್ದೇವೆ ಎಂದು ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಹೇಳಿದರು
ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ನಾದಶ್ರೀ ಕಲಾ ಕೇಂದ್ರದಲ್ಲಿ ಹಮ್ಮಿಕೊಂಡ ಜನ ಸಂಪರ್ಕ ಸಭೆಯಲ್ಲಿ ಮಾತನಾಡುತ್ತಿದ್ದರು.
ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಮತ್ತು ನನ್ನನ್ನು ಸೇರಿ ಇಲಾಖೆಯಿಂದ ಆಗುವ ತಪ್ಪುಗಳ ಬಗ್ಗೆ ನೀವು ಮುಕ್ತವಾಗಿ ಮಾತನಾಡಿ, ಜನರ ಕೆಲಸ ಮಾಡುವುದಕ್ಕಾಗಿಯೇ ನಾವು ಇರುವುದು. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಸಹಬಾಳ್ವೆಯ ಜೀವನ ನಡೆಸಲು ಪೊಲೀಸ್ ಇಲಾಖೆ ಕೈಗೊಳ್ಳಬೇಕಾದ ಕ್ರಮಗಳಲ್ಲಿ ಸಾಮಾಜಿಕ ಕಾಳಜಿಯುಳ್ಳ ನಿಮ್ಮಂತಹ ಸಹೃದಯ ನಾಗರಿಕರ ಸಹಕಾರ ಬೇಕಾಗಿದೆ ಎಂದು ಹೇಳಿದರು.
ಕುಮಟಾಕ್ಕೆ ಟ್ರಾಫಿಕ್ ಸ್ಟೇಶನ್ ಮಾಡುವ ಬಗ್ಗೆ ಈಗಾಗಲೇ ಶಾಸಕ ದಿನಕರ್ ಶೆಟ್ಟಿ ಅವರು ಪ್ರಯತ್ನ ಮಾಡುತ್ತಿರುವುದರಿಂದ ಮುಂದೆ ಒಳ್ಳೆಯದಾಗಲಿದೆ ಎಂಬ ನಿರೀಕ್ಷೆ ಇದೆ.
ಕಾನೂನು ಇರುವುದು ಸಮಾಜದ ಬಡವರು, ನೊಂದವರು, ದೌರ್ಜನ್ಯಕ್ಕೆ ಒಳಗಾದವರ ಸಹಾಯಕ್ಕೆ ಹೊರತು ಉಳ್ಳವರ ಪರವಾಗಿ ಅಲ್ಲಾ ದಿನದ 24 ಗಂಟೆ ಬೀಗಹಾಕದೇ ನಡೆಯುವ ಸರ್ಕಾರಿ ಕಚೇರಿ ಪೊಲೀಸ್ ಠಾಣೆ. ಸಾರ್ವಜನಿಕರ ಯಾವುದೇ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ಎಂ. ನಾರಾಯಣ ಹೇಳಿದರು.
ಈ ವೇಳೆಗೆ ನಿವೃತ್ತ ಪೊಲೀಸ್ ನಿರೀಕ್ಷಕರಾದ ಎನ್.ಆರ್. ಮುಕ್ರಿ, ಸಾಮಾಜಿಕ ಕಾರ್ಯಕರ್ತ ಎಸ್.ಟಿ.ನಾಯ್ಕ ಧಾರೇಶ್ವರ, ಚೇತನ್ ಶೇಟ್, ಪಿ.ಎಸ್.ಐ ರವಿ ಗುಡ್ಡಿ, ಪಿ.ಎಸ್.ಐ ಮಂಜುನಾಥ ಗೌಡರ್, ಪಿ.ಎಸ್.ಐ ಸಾವಿತ್ರಿ ನಾಯ್ಕ ಸೇರಿದಂತೆ ಸುಮಾರು 80 ಜನ ಹಾಜರಿದ್ದರು.