Slide
Slide
Slide
previous arrow
next arrow

ಸಾಧಕ ಕಂದಾಯ ಅಧಿಕಾರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನ

300x250 AD

ಸಿದ್ದಾಪುರ: ಕನ್ನಡ ಸಾಹಿತ್ಯ ಪರಿಷತ್ತಿನ ‘ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು’ ಕಾರ್ಯಕ್ರಮದಡಿಯಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಂದಾಯ ಇಲಾಖೆಯ ‘ಅತ್ಯತ್ತಮ ಕಂದಾಯ ಅಧಿಕಾರಿ-2024’ ಪ್ರಶಸ್ತಿ ಪುರಸ್ಕೃತ ಸಿದ್ದಾಪುರ ತಾಲೂಕಿನ ತಹಶೀಲ್ದಾರ ಎಂ.ಆರ್. ಕುಲಕರ್ಣಿಯವರನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲ ನಾಯ್ಕ ನೇತೃತ್ವದಲ್ಲಿ ಪರಿಷತ್ತಿನ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.

ರಾಜ್ಯದ ಕಂದಾಯ ಇಲಾಖೆಯ ವಿವಿಧ ಯೋಜನೆಗಳನ್ನು ನಿಗದಿತ ಸಮಯದೊಳಗೆ ಸಾರ್ವಜನಿಕರಿಗೆ ಅತಿ ವೇಗವಾಗಿ ಸೌಲಭ್ಯ ಒದಗಿಸಿರುವ ಕಂದಾಯ ಇಲಾಖೆಯ ಹಿರಿ ಕಿರಿಯ ಅಧಿಕಾರಿಗಳ ಸೇವೆಯನ್ನು ಆನ್ಲೈನ್ ಡಾಟಾ ಮೂಲಕ ಗುರುತಿಸಿ ಈ ವರ್ಷದಿಂದ ಕೊಡಲಾಗುವ ‘ಅತ್ಯುತ್ತಮ ಕಂದಾಯ ಅಧಿಕಾರಿ-2024’ ಪ್ರಶಸ್ತಿಗೆ ಸಿದ್ದಾಪುರ ತಹಶಿಲ್ದಾರ ಎಂ.ಆರ್. ಕುಲಕರ್ಣಿ ಭಾಜನರಾಗಿರುವುದು ತುಂಬಾ ಸಂತೋಷ ಹಾಗೂ ಅಭಿಮಾನದ ಸಂಗತಿ.ಇದಲ್ಲದೆ ಶ್ರೀಯುತರು ತಾಲೂಕಿನಲ್ಲಿ ರಾಷ್ಟ್ರೀಯ ಹಬ್ಬಗಳು, ಕನ್ನಡ ರಾಜ್ಯೋತ್ಸವ, ಇತ್ತೀಚೆಗೆ ಭುವನಗಿರಿ ಹಾಗೂ ಸಿದ್ದಾಪುರ ಪಟ್ಟಣದಲ್ಲಿ ನಡೆದ 87 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ರಥಜ್ಯೋತಿ ಯಾತ್ರೆ’, ಕವಿಗೋಷ್ಠಿ ಹೀಗೆ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಸೂಕ್ತವಾದ ಮಾರ್ಗದರ್ಶನ ಮಾಡಿ ಯಶಸ್ವಿಯಾಗಲು ಕಾರಣರಾಗಿದ್ದನ್ನು ಸ್ಮರಿಸಿ ಸಾಹಿತ್ಯ ಪರಿಷತ್ತು ಅಭಿಮಾನದಿಂದ ಗೌರವಿಸಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋಪಾಲ ನಾಯ್ಕ ಶ್ಲಾಘಿಸಿದರು.
ಈ ಸಮಯದಲ್ಲಿ ಕೋಶಾಧ್ಯಕ್ಷ ಪಿ.ಬಿ. ಹೊಸೂರು, ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ಶಿರಳಗಿ, ಪದಾಧಿಕಾರಿ ಚಂದ್ರಶೇಖರ ಕುಂಬ್ರಿಗದ್ದೆ, ಕಸಾಪ ಆಜೀವ ಸದಸ್ಯ ನಿವೃತ್ತ ನೌಕರರ ಸಂಘದ , ಸಿ.ಎಸ್. ಗೌಡರ ಮತ್ತಿತರರು ಉಪಸ್ಥಿತರಿದ್ದು ಶುಭ ಕೋರಿದರು.

300x250 AD
Share This
300x250 AD
300x250 AD
300x250 AD
Back to top