Slide
Slide
Slide
previous arrow
next arrow

ರೋಟರಿ ಸಂಸ್ಥೆಯ ಮೇಜರ್ ಡೋನರ್ ಗೌರವಕ್ಕೆ ಅಶುತೋಷ್

300x250 AD

ದಾಂಡೇಲಿ : ರೋಟರಿ ಸಂಸ್ಥೆಯ ವಿವಿಧ ಸೇವಾ ಚಟುವಟಿಕೆಗಳಿಗಾಗಿ ಅತಿ ಹೆಚ್ಚಿನ ದೇಣಿಗೆಯನ್ನು ನೀಡಿದ ನಗರದ ಸಾರಿಗೆ ಉದ್ಯಮಿ ಹಾಗೂ ರೋಟರಿ ಕ್ಲಬ್ಬಿನ ಪ್ರಧಾನ ಕಾರ್ಯದರ್ಶಿಯಾಗಿರುವ ಅಶುತೋಷ್ ಕುಮಾರ್ ರಾಯ್ ಅವರು ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ಮೇಜರ್ ಡೋನರ್ ಗೌರವಕ್ಕೆ ಪಾತ್ರರಾಗಿದ್ದಾರೆ.

ಇತ್ತೀಚೆಗೆ ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಕಾರ್ಯಕ್ರಮದಲ್ಲಿ ಅಶುತೋಷ್ ಕುಮಾರ್ ರಾಯ್ ಅವರಿಗೆ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಟಿ.ಆರ್.ಎಫ್ ಚೇರ್ ಆಗಿರುವ ಮಾರ್ಕ್ ಡೇನಿಯಲ್ ಮೆಲೋನಿ ಮೇಜರ್ ಡೋನರ್ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

300x250 AD

ಅಶುತೋಷ್ ಕುಮಾರ್ ರಾಯ್ ಅವರು ನಗರದ ರೋಟರಿ ಕ್ಲಬ್ಬಿನಲ್ಲಿ ನಾಲ್ಕು ಬಾರಿ ಖಜಾಂಚಿಯಾಗಿ ಅನುಪಮ ಸೇವೆಯನ್ನು ಸಲ್ಲಿಸಿದ್ದರು. ಇದೀಗ ಎರಡನೇ ಬಾರಿ ಕಾರ್ಯದರ್ಶಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ನಗರದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಪ್ರಗತಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅಶುತೋಷ್ ಕುಮಾರ್ ರಾಯ್ ಅವರು ದಾಂಡೇಲಿ ಟ್ರಾನ್ಸ್ಪೋರ್ಟರ್ಸ್ ಅಸೋಸಿಯೇಷನ್ ಇದರ ಖಜಾಂಚಿಯಾಗಿ, ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಖಜಾಂಚಿಯಾಗಿ, ಕರ್ನಾಟಕ ಉತ್ತರ ಭಾರತೀಯ ಸಮಾಜದ ಖಜಾಂಚಿಯಾಗಿ, ಛಠ್ ಪೂಜಾ ಸೇವಾ ಸಮಿತಿಯ ಪದಾಧಿಕಾರಿಯಾಗಿ, ಜೆ.ಎನ್ ರಸ್ತೆಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪದಾಧಿಕಾರಿಯಾಗಿ ಹೀಗೆ ಹತ್ತು ಹಲವು ಸಂಘಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಶುತೋಷ್ ಕುಮಾರ್ ರಾಯ್ ಅವರು ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಸಾಮಾಜಿಕ, ಆರೋಗ್ಯ ಹಾಗೂ ಶೈಕ್ಷಣಿಕ ಕಾರ್ಯ ಚಟುವಟಿಕೆಗಳಿಗಾಗಿ ಅತಿ ಹೆಚ್ಚಿನ ದೇಣಿಗೆಯನ್ನು ನೀಡಿರುವುದಕ್ಕೆ ರೋಟರಿ ಸಂಸ್ಥೆಯು ಗೌರವಿಸಿದೆ.

Share This
300x250 AD
300x250 AD
300x250 AD
Back to top