ಶಿರಸಿ: ಇಲ್ಲಿನ ಲಯನ್ಸ್ ಶಿಕ್ಷಣ ಸಂಸ್ಥೆಯಲ್ಲಿ ಗಾಂಧಿ ಜಯಂತಿ ಅಂಗವಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಲಯನ್ಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಶಶಾಂಕ್ ಹೆಗಡೆ ಸ್ವಾಗತಿಸಿ, ಗಾಂಧೀಜಿಯ ಸಂದೇಶವನ್ನು ಸಂಕ್ಷಿಪ್ತವಾಗಿ ಹೇಳಿದರು. ವಿದ್ಯಾರ್ಥಿ ಪ್ರತಿನಿಧಿಯಾದ ಕುಮಾರಿ ಪೃಥ್ವಿ ಹೆಗಡೆ ಮಾತನಾಡಿದಳು. ಸಮಾಜ ವಿಜ್ಞಾನ ಶಿಕ್ಷಕರಾದ
ಗಣಪತಿ ಗೌಡ ಅವರು ಗಾಂಧೀಜಿಯವರ ಜೀವನದ ಕುರಿತಾದ ರಸಪ್ರಶ್ನೆ ಮೂಲಕ ಎಲ್ಲರ ಜ್ಞಾನವನ್ನು ಹೆಚ್ಚಿಸಿ ರಂಜಿಸಿದರು. ಎಲ್ಲರೂ ಸೇರಿ ಭಜನೆ ಮಾಡಲಾಯಿತು. ತರಗತಿ ಕೋಣೆಗಳನ್ನು ಸ್ವಚ್ಛಗೊಳಿಸಲಾಯಿತು.
ಶಿರಸಿ ಲಯನ್ಸ್ ಕ್ಲಬ್ ಸದಸ್ಯರು ಮತ್ತು ಲಿಯೋ ಕ್ಲಬ್ ವಿದ್ಯಾರ್ಥಿಗಳು ರಸ್ತೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನಜಾಗೃತಿ ಮೂಡಿಸಿದರು. ಈ ಕಾರ್ಯಕ್ರಮದಲ್ಲಿ ಲಯನ್ಸ ಜೋನ್ ಚೇರ್ ಪರ್ಸನ್ ಎಂ.ಜೆ.ಎಫ್. ಲಯನ್. ಡಾ.ಅಶೋಕ ಹೆಗಡೆ, ಜಿಲ್ಲಾ ಲಿಯೋ ಮಾರ್ಗದರ್ಶಕಿ ಲಯನ್ ಪ್ರತಿಭಾ ಹೆಗಡೆ, ಶಿರಸಿ ಲಯನ್ಸ ಕ್ಲಬ್ ಅಧ್ಯಕ್ಷರಾದ ಎಂಜೆಎಫ್ ಲಯನ್ ಅಶ್ವಥ್ ಹೆಗಡೆ, ಕಾರ್ಯದರ್ಶಿ ಎಂಜೆಎಫ್ ಲಯನ್ ವಿನಾಯಕ ಭಾಗ್ವತ್, ಕೋಶಾಧಿಕಾರಿ ಲಯನ್ ಸಿಎ ವೇಣುಗೋಪಾಲ ಹೆಗಡೆ, ಲಿಯೋ ಮಾರ್ಗದರ್ಶಕ ಲಯನ್ ಅಶ್ವಥ್ ಹೆಗಡೆ ಮುಳಖಂಡ ಸೇರಿದಂತೆ ಹಲವಾರು ಲಯನ್ಸ್ ಸದಸ್ಯರು ಉಪಸ್ಥಿತರಿದ್ದರು. ಕಸದಿಂದ ರಸ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಅಶ್ವಥ್ ಹೆಗಡೆ ಅವರು ಮಾತನಾಡಿ, ಸ್ವಚ್ಛ ಸುಂದರ ಭಾರತದ ನಿರ್ಮಾಣಕ್ಕೆ ಕರೆಕೊಟ್ಟರು.