ಶಿರಸಿ: ಖಾಸಗಿ ಶಾಲಾ ಶಿಕ್ಷಕರ ಸಂಘ ಕ್ರಕ್ಸ್- ಕರ್ನಾಟಕ ವತಿಯಿಂದ ರಾಜ್ಯಮಟ್ಟದ ಖಾಸಗಿ ಶಾಲಾ ಶಿಕ್ಷಕರ ದಿನಾಚರಣೆ ಹಾಗೂ ಅತ್ಯುತ್ತಮ ಖಾಸಗಿ ಶಾಲಾ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ”ವಿಭುಧನ್ – 2024 ” ಹೆಸರಿನಲ್ಲಿ ಬೆಂಗಳೂರಿನ ಜ್ಞಾನಭಾರತಿ ಆವರಣದ ಪ್ರೊಫೆಸರ್ ಕೆ. ವೆಂಕಟಗಿರಿಗೌಡ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಿಕ್ಷಣ ತಜ್ಞ, ಎಂಇಎಸ್ ಶಿಕ್ಷಣ ಸಮೂಹ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಎಚ್.ಎಸ್. ಗಣೇಶ್ ಭಟ್ಟ ನಾಲೆಡ್ಜ್ ಪಬ್ಲಿಕೇಷನ್ ನ ಸಂಸ್ಥಾಪಕ ಬಿ.ಎನ್. ಸುನೀಲ್, ನ್ಯಾಕ್ ಸಲಹೆಗಾರರಾದ ಡಾ. ಸುಜಾತ ಪಿ. ಶಾನಭಾಗ್, ಪ್ರೊ. ಅನಿಲ್ ಕುಮಾರ್ ಜೋಶಿ, ಖಾಸಗಿ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸುರೇಶ್ ಎಸ್.ಗೊಲ್ಲ, ರಾಜ್ಯ ಉಪಾಧ್ಯಕ್ಷ ಪ್ರಮೀಳ, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀನಿಧಿ ಕೋಡಿಹಳ್ಳಿ ಸೇರಿದಂತೆ ಹಲವರು ಇದ್ದರು.
ಕಾರ್ಯಕ್ರಮದಲ್ಲಿ ಶಿರಸಿ ಲಯನ್ಸ್ ಸಮೂಹ ಶಾಲೆಗಳ ಹಾಗೂ ಡಾಕ್ಟರ್ ಭಾಸ್ಕರ್ ಸ್ವಾದಿ ಮೆಮೋರಿಯಲ್ ಲಯನ್ಸ್ ಪಿ.ಯು.ಕಾಲೇಜಿನ ಪ್ರಾಚಾರ್ಯರಾದ ಶಶಾಂಕ ಹೆಗಡೆ ಇವರಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಿರಸಿ ಲಯನ್ಸ್ ಎಜ್ಯಕೇಷನ್ ಸೊಸೈಟಿಯ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳು ಶಿರಸಿ ಲಯನ್ಸ ಶಾಲೆಯಲ್ಲಿ ಶಶಾಂಕ ಹೆಗಡೆಯವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಅಧ್ಯಕ್ಷರಾದ ಲಯನ್ ಪ್ರಭಾಕರ ಹೆಗಡೆ, ಗೌರವ ಕಾರ್ಯದರ್ಶಿಗಳಾದ ಲಯನ್ ಪ್ರೊ.ರವಿ ನಾಯಕ್, ಕೋಶಾಧ್ಯಕ್ಷರಾದ ಲಯನ್ ಉದಯ ಸ್ವಾದಿ, ಉಪಾಧ್ಯಕ್ಷರಾದ ಲಯನ್ ಕೆ.ಬಿ.ಲೋಕೇಶ ಹೆಗಡೆ, ಸಹಕಾರ್ಯದರ್ಶಿಗಳಾದ ಲಯನ್ ವಿನಯ ಹೆಗಡೆ ಬಸವನಕಟ್ಟೆ, ಸದಸ್ಯರುಗಳಾಗಿ ಲಯನ್ ತ್ರಿಕ್ರಮ ಪಟವರ್ಧನ, ಲಯನ್ ಶ್ಯಾಮಸುಂದರ ಭಟ್, ಲಯನ್ ಶ್ರೀಕಾಂತ ಹೆಗಡೆ, ಲಯನ್‌ಚಂದ್ರಶೇಖರ ಹೆಗಡೆ ಹಾಗೂ ಶಿರಸಿ ಲಯನ್ಸ ಸಮೂಹ ಶಾಲೆ ಹಾಗೂ ಕಾಲೇಜುಗಳ ಶಿಕ್ಷಕ ಶಿಕ್ಷಕೇತರ ವೃಂದ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಾಜ್ಯಮಟ್ಟದ ಈ ಪ್ರಶಸ್ತಿ ಪಡೆದ ಶಶಾಂಕ ಹೆಗಡೆ ಅವರಿಗೆ ಶಿರಸಿ ಲಯನ್ಸ ಎಜ್ಯಕೆಷನ್ ಸೊಸ್ಯಟಿಯ ಸರ್ವದಸ್ಯರು, ಶಿರಸಿ ಲಯನ್ಸ ಕ್ಲಬ್ ಪರಿವಾರ, ಶಿರಸಿ ಲಯನ್ಸ ಸಮೂಹ ಶಾಲೆಗಳು ಹಾಗೂ ಕಾಲೇಜಿನ ಬೋದಕ, ಬೋದಕೇತರ ವೃಂದ, ಪಾಲಕ ವೃಂದ ಶುಭ ಹಾರೈಸಿದೆ.