ಆಮೆಗತಿಯ ತನಿಖೆ ಚುರುಕುಗೊಳಿಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಿ: ಶ್ರೀರಾಮ ಸೇನೆಯಿಂದ ಮನವಿ ಸಲ್ಲಿಕೆ
ಭಟ್ಕಳ: ಯಮುನಾ ನಾಯ್ಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಕೋರ್ಟ್ ಆದೇಶದಂತೆ ಶೀಘ್ರ ಮರುತನಿಖೆ ಮುಗಿಸಲು ಒತ್ತಾಯಿಸಬೇಕೆಂದು ಶ್ರೀರಾಮ ಸೇನೆ ರಾಜ್ಯ ಅಧ್ಯಕ್ಷ ಗಂಗಾಧರ ಕುಲಕರ್ಣಿ ಒತ್ತಾಯಿಸಿದ್ದಾರೆ.
ಅವರು ಇಲ್ಲಿನ ನಿಶ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಅಕ್ಟೋಬರ್ 23, 2010ರಲ್ಲಿ ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತಹ ಯಮುನಾ ನಾಯ್ಕ ರೇಪ್ ಅಂಡ್ ಮರ್ಡರ್ ಕೇಸ್. ಈ ಪ್ರಕರಣದಲ್ಲಿ ಯಾರು ಆರೋಪಿತರಿದ್ದರು, ಅವರು ಹೇಗೆ ಬಚಾವಾದರು ಅಥವಾ ಬಚಾವ್ ಮಾಡಿದರು ಎಂದು ಗೊತ್ತಿಲ್ಲ. ಆದರೆ ಒಬ್ಬ ಅಮಾಯಕ ಕೇಸಿಗೆ ಸಂಬಂಧಿಸದ ವ್ಯಕ್ತಿ ವೆಂಕಟೇಶ್ ಹರಿಕಾಂತ ಆರು ವರ್ಷ ಎಂಟು ತಿಂಗಳು ನರಕಯಾತನೆ ಅನುಭವಿಸಿದ್ದಾನೆ. ಅವನು ಮಾಡದ ಅಪರಾಧಕ್ಕೆ ಈ ಶಿಕ್ಷೆ ಅನುಭವಿಸಿದ್ದಾನೆ. ನಮ್ಮ ವ್ಯವಸ್ಥೆ ಹೇಗೆ ಹದಗೆಟ್ಟು ಹೋಗಿದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ.
2017 ರಲ್ಲಿ ಹೈಕೋರ್ಟ್ ವೆಂಕಟೇಶ್ ಹರಿಕಾಂತ ರವರನ್ನು ನಿರಪರಾಧಿ ಎಂದು ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೇ ಹೈಕೋರ್ಟ್ ಇನ್ನೊಂದು ಆದೇಶ ಮಾಡಿದೆ ಈ ಕೇಸಿನ ಮರುತನಿಖೆ ಆಗಬೇಕು ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚಿ ಬಂಧನ ಮಾಡಬೇಕು ಎಂದು. ಹೈಕೋರ್ಟ್ ಆದೇಶವಾಗಿ ಏಳು ವರ್ಷವಾದರೂ ಇನ್ನೂ ಆರೋಪಿಗಳ ಬಂಧನವಾಗಿಲ್ಲ ಹಾಗೂ ತನಿಖೆಯಾಗುತ್ತಿಲ್ಲ. ಯಾರನ್ನು ರಕ್ಷಣೆ ಮಾಡಲು ಹೊರಟಿದ್ದಾರೆ. ಇದರ ಹಿನ್ನೆಲೆ ಏನಿದೆ. ಈ ಕೇಸಿನ ಹಿಂದೆ ಯಾರ ಕೈವಾಡವಿದೆ ಪೊಲೀಸ್ ಇಲಾಖೆಯನ್ನು ಏಕೆ ಕಟ್ಟಿ ಹಾಕಿದ್ದಾರೆ.
2011ರಲ್ಲಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲ್ಯಾಬ್ ರಿಪೋರ್ಟ್ ಬಂದಿದೆ ಅದರಲ್ಲಿ ವೆಂಕಟೇಶ ಹರಿಕಂತ್ರ ರವರ ಪಾತ್ರ ಇಲ್ಲದಿರುವುದು ಆಗಲೇ ತಿಳಿದು ಬಂದಿದೆ. ಆದರೆ ಆ ವರದಿಯನ್ನು ಕೊಡಲು ವಿಳಂಬ ನೀತಿಯನ್ನು ಪಾಲಿಸಿ ಆ ವ್ಯಕ್ತಿಗೆ ನರಕಯಾತನೆ ನೀಡಿದ್ದಾರೆ. ಇದರಿಂದ ಕಾನೂನಿನ ಮೇಲೆ ನ್ಯಾಯಾಂಗದ ಮೇಲೆ ಹಾಗೂ ಪೋಲಿಸ್ ಇಲಾಖೆಯ ಮೇಲೆ ಜನರಿಗೆ ತಾತ್ಸಾರ, ತಿರಸ್ಕಾರ ಭಾವನೆ ಉಂಟಾಗಿದೆ. ಇಲಾಖೆ ಹಾಗೂ ಕೋರ್ಟ್ ಈ ಬಗ್ಗೆ ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ. ಮರು ತನಿಖೆಗೆ ಆದೇಶ ನೀಡಿ ಏಳು ವರ್ಷ ಆಗಿದೆ ಕೋರ್ಟ್ ಪೊಲೀಸ್ ಇಲಾಖೆಗೆ ಚಾಟಿ ಬೀಸಬೇಕಿತ್ತು. ಅವರು ಸಹ ಸುಮ್ಮನಿದ್ದಾರೆ ಏಕೆಂದು ತಿಳಿಯುತ್ತಿಲ್ಲ. ಭಟ್ಕಳ ಡಿ ಎಸ್ ಪಿ ರವರಿಗೆ ಆಗ್ರಹ ಮಾಡುತ್ತೇನೆ ಆದಷ್ಟು ಬೇಗ ತನಿಖೆಯನ್ನು ಮಾಡಿ ಈ ಸಮಾಜದಲ್ಲಿ ಸತ್ತವರನ್ನು ಸಮಾಧಿ ಮಾಡುವ ಬದಲು ಬಡವರಿಗೆ ಬಲಹೀನರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡಿ ಎಂದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹ ಕೊಲೆಯ ಆರೋಪಿ ಪತ್ತೆಯಾಗದಿರುವುದು ಐದಾರು ಪ್ರಕರಣಗಳು ಆಗಿವೆ, ಡಾ. ಚಿತ್ತರಂಜನ್, ತಿಮ್ಮಪ್ಪ ನಾಯ್ಕ , ಪರೇಶ್ ಮೇಸ್ತ, ಯಾವ ಕೇಸುಗಳಿಗೂ ಇವತ್ತಿನವರೆಗೂ ನ್ಯಾಯ ಸಿಗಲಿಲ್ಲ. ಈ ಎಲ್ಲ ಕೇಸುಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಯಾದಂತಹ ಕೇಸ್ ಗಳಾಗಿವೆ ಈ ಜಿಲ್ಲೆಯಲ್ಲಿ ಇಂತಹ ಸಾವುಗಳಿಗೆ ನ್ಯಾಯ ಇಲ್ಲ ಕೊಲೆಗೆಡುಕರು ಅಪರಾಧಿಗಳು ರೇಪಿಸ್ಟ್‌ಗಳು ಆರಾಮಾಗಿರುವಂತ ವ್ಯವಸ್ಥೆ ಈ ಜಿಲ್ಲೆಯಲ್ಲಿ ಆಗುತ್ತಿದೆ. ಸಮಾಜದಲ್ಲಿ ಈ ವಿಷಯದ ಬಗ್ಗೆ ಜಾಗೃತಿಯನ್ನು ಮೂಡಿಸುವ ಹಾಗೂ ಮುಂದಿನ ದಿನಗಳಲ್ಲಿ ಈ ಎಲ್ಲಾ ಕೇಸ್ ಗಳ ಬಗ್ಗೆ ಹೋರಾಟ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ.
ದಾವಣಗೆರೆಯಲ್ಲಿ ನಡೆದಂತ ಘಟನೆ ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಮುಸ್ಲಿಂ ಗುಂಡಾಗಳ ಅಟ್ಟಹಾಸ ಆಗಿ ಹೋಗಿದೆ ಇವರಿಗೆ ಕಾನೂನಿನ ಭಯವಿಲ್ಲ ಪೊಲೀಸ್ ಇಲಾಖೆಯ ಭಯವಿಲ್ಲ. ಸರ್ಕಾರದ ಭಯವಿಲ್ಲ. ಹಿಂದೂ ಧರ್ಮದ ಗಣಪತಿಯ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಮಾಡುವುದು ಪೆಟ್ರೋಲ್ ಬಾಂಬ್ ಗಳನ್ನು ಹಾಕುವಂಥದ್ದು, ಬಾಟಲ್‌ಗಳನ್ನು ಒಗೆಯುವಂಥದ್ದು ಈ ರೀತಿಯಾಗಿ ರಾಜ್ಯದೊಳಗೆ ಮುಸ್ಲಿಂ ಗುಂಡಾಗಳ ದುರವರ್ತನೆ ನಡೆಯುತ್ತಿದೆ. ವಿಶೇಷವಾಗಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಈ ಮುಸ್ಲಿಂ ಗುಂಡಾಗಳ ಪುಂಡಾಟಿಕೆ ನಡೆಯುತ್ತಿದೆ ಈ ರೀತಿಯ ಪ್ರವೃತ್ತಿ ಬಹಳ ಅಪಾಯಕಾರಿಯಾಗಿದೆ.
ಪೆಟ್ರೋಲ್ ಬಾಂಬ್ ಹಾಕಿದರೆ ನಮ್ಮ ಗ್ರಹ ಸಚಿವರಿಗೆ ಅದು ಆಕಸ್ಮಿಕ ಘಟನೆ ಎಂದು ಹೇಳಿಕೆ ನೀಡುತ್ತೀರಾ. ನಿಮಗೆ ಯೋಗ್ಯತೆ ಇಲ್ಲವಾದರೆ. ಈ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ಧಮ್ ಇಲ್ಲವಾದರೆ ನಿಮ್ಮ ಸಚಿವ ಸ್ಥಾನದಿಂದ ಕೆಳಗೆ ಇಳಿಯಿರಿ. ಈ ರೀತಿ ಒಂದು ಮುಸ್ಲಿಂರನ್ನು ತುಷ್ಟಿಕರಣ ಮಾಡುವ ಸಲುವಾಗಿ ಈ ರೀತಿ ಹೇಳಿಕೆ ಕೊಟ್ಟು ರಾಜ್ಯಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದೀರಾ. ಇದಕ್ಕೆಲ್ಲ ನೇರ ಹೊಣೆ ಗೃಹ ಇಲಾಖೆ ಹಾಗೂ ಸರ್ಕಾರದ್ದಾಗಿದೆ. ನಾಗಮಂಡಲದಲ್ಲಿ ಪ್ರಕರಣ ನಡೆಯುವ ನಾಲ್ಕು ದಿನಗಳ ಹಿಂದಷ್ಟೇ ಪಿ.ಎಫ್.ಐ ಕಾರ್ಯಕರ್ತರು ಬಂದು ಕೆಲಸ ಮಾಡಿರುವ ಬಗ್ಗೆ ಮಾಹಿತಿ ಇತ್ತು. ಆದರೂ ಕೂಡ ಗೃಹ ಇಲಾಖೆಯಿಂದ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ದುರಾದೃಷ್ಟ ಏನೆಂದರೆ ಗಣಪತಿ ಕೂರಿಸಿದ ವ್ಯಕ್ತಿಯನ್ನು A1 ಆರೋಪಿ ಮಾಡಿದ್ದಾರೆ. ಕಲ್ಲು ತೋರಿದವರನ್ನು A42, 43 ,44 ಆರೋಪಿಯನ್ನಾಗಿ ಮಾಡಲಾಗಿದೆ. ನಮ್ಮ ರಾಜ್ಯವನ್ನು ತಾಲಿಬಾನ್ ಮಾಡಲು ಹೊರಟಿದ್ದೀರಾ ಎಂದ ಅವರು ಮುಂದಿನ ದಿನಗಳಲ್ಲಿ ಇಲ್ಲಿಯೇ ಆದರೂ ಹಿಂದೂ ಮೆರವಣಿಗೆಗಳಿಗೆ ರಕ್ಷಣೆ ಬೇಕೆಂದರೆ ಶ್ರೀ ರಾಮ ಸೇನೆಯನ್ನು ಸಂಪರ್ಕ ಮಾಡಿ ನಿಮ್ಮ ಕಾರ್ಯಕ್ಕೆ ರಾಮ ಸೇನೆಯ ಕಾರ್ಯಕರ್ತರು ಶಸ್ತ್ರ ಸಜ್ಜಿತರಾಗಿ ನಿಮ್ಮ ಜೊತೆ ನಿಂತುಕೊಳ್ಳುತ್ತೇವೆ ಎಂದರು.
ಹಿಂದೂ ಧರ್ಮದ ಗಣಪತಿ ಮೆರವಣಿಗೆ ಏನು ಮಾಡಿದೆ ನಿಮಗೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಹೇಳುತ್ತಾರೆ ನಮ್ಮ ಮಸೀದಿ ಎದುರಿಗೆ ಗಣಪತಿಯ ಮೆರವಣಿಗೆ ಹೋಗಬಾರದು ಎಂದು. ಆ ಮಸೀದಿ ಪಾಕಿಸ್ತಾನದಲ್ಲಿ ಇದೆಯಾ?, ಅಪಘಾನಿಸ್ತಾನದಲ್ಲಿ ಇದೆಯಾ?ಈ ದೇಶದ ಕಾನೂನಿನ ಒಳಗೆ ಎಲ್ಲಾ ಕಡೆಗೂ ಎಲ್ಲರೂ ಧಾರ್ಮಿಕ ಕಾರ್ಯಗಳನ್ನು ಮಾಡಬಹುದೆಂದು ಇದೆ. ಈ ದೇಶ ನಿಮ್ಮಪ್ಪನದ ಈ ರೀತಿಯಾದ ಮಾನಸಿಕ ಪ್ರವೃತ್ತಿ ಮುಸ್ಲಿಂ ಸಮಾಜದಲ್ಲಿ ಆಗುತ್ತಿದೆ ಇದನ್ನು ನಾನು ಎಲ್ಲಾ ಮೌಲ್ವಿಗಳಿಗೆ ಹೇಳುತ್ತಿದ್ದೇನೆ, ಮುಸ್ಲಿಂ ಸಮಾಜದ ನಾಯಕರಿಗೆ ಹೇಳುತ್ತೇನೆ ನಿಮ್ಮ ಧರ್ಮದ ಜನರಿಗೆ ಹದ್ದುಬಸ್ತ್‌ನಲ್ಲಿ ಇಡಿ ಮುಂದಿನ ದಿನ ಇದೇ ರೀತಿ ಹಿಂದೂ ಸಮಾಜ ತಿರುಗಿ ಬಿದ್ದಲ್ಲಿ ನಿಮ್ಮ ಈದ್ ಮಿಲಾದ್ ಮೆರವಣಿಗೆಗೆ, ರಂಜಾನ್ ಮೆರವಣಿಗೆಗೆ, ಬಕ್ರೀದ್ ಮೆರವಣಿಗೆಗೆ, ಮೋರಂ ಮೆರವಣಿಗೆಗೆ ನಮ್ಮ ದೇವಸ್ಥಾನದ ಎದುರಿಗೆ ಬರಬೇಡಿ ಎಂದು ಹೇಳಲು ನಾವು ಪ್ರಾರಂಭಿಸಿದರೆ ಏನಾಗುತ್ತದೆ ಹೇಳಿ, ಏನಾಗಿದೆ ಈ ಮುಸ್ಲಿಂ ಸಮುದಾಯಕ್ಕೆ ನಾವು ಸಂತೋಷದಿಂದ ಹಬ್ಬ ಆಚರಿಸುವುದೇ ಬೇಡವೇ ಇದೇ ಪ್ರವೃತ್ತಿ ಮುಂದುವರಿಸಿದಲ್ಲಿ ನಾವು ಹಿಂದುಗಳು ಒಟ್ಟಾಗಿ ತಿರುಗು ಬಿದ್ದಾಗ ನಿಮ್ಮ ಗತಿ ಎಲ್ಲಿಗೆ ಮುಟ್ಟುತ್ತದೆ ಅದಕ್ಕಾಗಿ ಇನ್ನು ಮುಂದಾದರು ಸರಿಯಾಗಿ ಇರಿ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿ ಬಳಿಕ ಭಟ್ಕಳ ಡಿವೈಎಸ್ಪಿ ಅವರಿಗೆ ಮನವಿ ಸಲ್ಲಿಸಿದರು. ಡಿ ವೈಎಸ್ಪಿ ಅನುಪಸ್ಥಿತಿಯಲ್ಲಿ ನಗರ ಠಾಣೆಯ ಸಿ.ಪಿ.ಐ ಗೋಪಿ ಕೃಷ್ಣ ಮನವಿ ಸ್ವೀಕರಿಸಿದರು. ಮನವಿಯಲ್ಲಿ 2010 ಅಕ್ಟೋಬರ 23 ಕ್ಕೆ ಯಮುನಾ ನಾಯ್ಕ ಅತ್ಯಾಚಾರ ಹಾಗೂ ಕೊಲೆಯ ಭೀಕರ ಪ್ರಕರಣ ನಡೆದಿತ್ತು. ಈ ಪ್ರಕರಣದಲ್ಲಿ ಅಮಾಯಕ ವೆಂಕಟೇಶ ಹರಿಕಾಂತನನ್ನು ಬಂಧಿಸಿ 6-8 ತಿಂಗಳು ಬಂಧನದಲ್ಲಿ ಇರಿಸಿ ನಂತರ ನಿರಪರಾಧಿ ಎಂದು 2017 ರಲ್ಲಿ ಹೈಕೋರ್ಟ ಆದೇಶದಂತೆ ಬಿಡುಗಡೆಯಾದರು. ಜೊತೆಗೆ ಈ ಪ್ರಕರಣದ ಮರುತನಿಖೆಗೆ ಆದೇಶವಾಗಿದೆ.
ಆದರೆ 7 ವರ್ಷ ಕಳೆದರೂ ನಿಜವಾದ ಆರೋಪಿಗಳ ಬಂಧನವಾಗದಿರುವುದು ದುರ್ದೈವ, ತನಿಖೆಯ ಆಮೆಗತಿ ಸೂಚಿಸುತ್ತದೆ. ನೊಂದ ಕುಟುಂಬಕ್ಕೆ ನ್ಯಾಯ ಇದು ವಿಳಂಭವಾಗುತ್ತಿರುವುದರಿಂದ ವಿಶ್ವಾಸ ಕಳೆದುಕೊಳ್ಳುತ್ತಿದೆ. ಅತ್ಯಾಚಾರಿ, ಕೊಲೆ ಪಾತಕರಿಗೆ ಕಾನೂನಿನ ಭಯವಿಲ್ಲದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ತನಿಖೆ ಚುರುಕುಗೊಳಿಸಿ ತಕ್ಷಣ ಅತ್ಯಾಚಾರ, ಕೊಲೆ ಮಾಡಿದ ಪಾಪಿಗಳಿಗೆ ಉಗ್ರ ಶಿಕ್ಷೆಗೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಜಯಂತ ಮಾಯ್ಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಆಡ್ಲಾರ್, ತಾಲೂಕಾ ಅಧ್ಯಕ್ಷ ರಾಜು ನಾಯ್ಕ .ರಾಮದಾಸ ಉಪಸ್ಥಿತರಿದ್ದರು