ಶಿರಸಿ: ಬಿಸಲಕೊಪ್ಪ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ತಾಲೂಕಿನ ಉಲ್ಲಾಳಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಡಗರ ಸಂಭ್ರಮದಿಂದ ಅರ್ಥಪೂರ್ಣವಾಗಿ ನೆರವೆರಿತು.
ಕಾರ್ಯಕ್ರಮವನ್ನು ತಾಲ್ಲೂಕು ಶಿಕ್ಷಣಾಧಿಕಾರಿ ನಾಗರಾಜ ಸಿ. ನಾಯ್ಕ ಉದ್ಘಾಟಿಸಿ ಮಾತನಾಡಿ ಮಕ್ಕಳಲ್ಲಿ ಕಲಿಕೆಯ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳು ಅತೀ ಮುಖ್ಯ. ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗಿತೆ ಎಂಬ ನಾಣ್ಣುಡಿಯಂತೆ ವಿದ್ಯಾರ್ಥಿಗಳ ಬದುಕಿನಲ್ಲಿ ಚಿಕ್ಕವರಿರುವಾಗಲೆ ಅವರಿಗೆ ಉತ್ತಮ ಸಂಸ್ಕೃತಿಯನ್ನು ನೀಡಿ, ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
ಎಸ್. ಡಿ.ಎಂ.ಸಿ. ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿ ನಾವು ಓದಿದ ಶಾಲೆಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಾಗ ಅದನ್ನು ಸದುಪಯೋಗ ಮಾಡಿಕೊಳ್ಳಬೇಕು,ಶಿಕ್ಷಕರು,ಹಳೆಯವಿದ್ಯಾರ್ಥಿಗಳು ಮತ್ತು ಊರಿನವರ ಸಹಕಾರವಿದ್ದರೆ ಶಾಲೆಯಲ್ಲಿ ಯಾವ ಕಾರ್ಯಕ್ರಮವನ್ನಾದರೂ ಯಶಸ್ವಿಗೊಳಿಸಬಹುದು ಎನ್ನುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಎಲ್ಲರ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಪ್ರತಿಭಾ ಕಾರಂಜಿಯಲ್ಲಿ ಒಟ್ಟು ೧೦ ಶಾಲೆಗಳಿಂದ ೧೫೦ ಮಕ್ಕಳು ಭಾಗಿಯಾಗಿದ್ದರು. ಛದ್ಮವೇಷ, ಚಿತ್ರಕಲೆ, ಭಕ್ತಿ ಗೀತೆ, ಧಾರ್ಮಿಕ ಪಠಣ,ಮಿಮಿಕ್ರಿ ಅಭಿನಯ ಗೀತೆ,ಕಂಠಪಾಠ ಸೇರಿದಂತೆ ಒಟ್ಟು ೨೭ ಸ್ಪರ್ದೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕ್ಲಸ್ಟರ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾದರು.
ಛದ್ಮವೇಷದಲ್ಲಿ,ಈಶ್ವರ, ಕಾಳಿ ಹಾಗೂ ಸರಸ್ವತಿ ಪಾತ್ರ ಮಾಡಿದ ಮಕ್ಕಳ ಅಭಿನಯ ನೋಡುಗರನ್ನ ಮಂತ್ರಮುಗ್ದರನ್ನಾಗಿಸಿತು.ಇದೆ ಸಂದರ್ಭದಲ್ಲಿ ವಲಯ,ಹಾಗೂ ತಾಲ್ಲೂಕು ಮಟ್ಟದ ಕ್ರೀಢಾಕೂಟದಲ್ಲಿ ವೀರಾಗ್ರಣಿ ಪ್ರಶಸ್ತಿ ಪಡೆದ ವಿದ್ಯಾರ್ಥಿನಿ ಪ್ರಣತಿಯನ್ನ ಸನ್ಮಾನಿಸಿ ಗೌರವಿಸಲಾಯಿತು.ಜೊತೆಗೆ ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದನಾ ಪತ್ರ ನೀಡಿ ಕೃತಜ್ಞತೆ ತೋರಿದರು.
ಬಿಸಲಕೊಪ್ಪ ವಲಯದ ಸಿ.ಆರ್.ಪಿ ರಮೇಶ್ ಕಮ್ಮಾರ್ ಕಾರ್ಯಕ್ರಮ ವನ್ನು ನೆರವರಿಸಿಕೊಟ್ಟರು, ಶಾಲಾ ಮುಖ್ಯ ಶಿಕ್ಷಕಿ ನಾಗವೆಣಿ ಹೆಗಡೆ ವಂದನಾರ್ಪಣೆ ಮಾಡಿದರು.
ಈ ವೇಳೆ ಶಿಕ್ಷಣ ಸಂಯೋಜಕರಾದ ಸತೀಶ್ ಮಡಿವಾಳ,ಬಿ.ಆರ್.ಪಿ ಬಸವರಾಜ, ದಮನ್ ಬೈಲ್, ಸಿ.ಆರ್.ಪಿ ಎಂ.ಎಸ್.ನಾಯ್ಕ,ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ನೇತ್ರಾವತಿ ನಾಯ್ಕ, ಗ್ರಾಮ ಪಂಚಾಯತ ಅಧ್ಯಕ್ಷೆ ಕಿರಣ ಭಟ್ಟ, ಸದಸ್ಯರಾದ ರಾಘವೇಂದ್ರ ನಾಯ್ಕ,ವಿಧ್ಯಾಧರ ಭಟ್,ಗ್ರಾಮಾಭಿವೃದ್ದಿ ಸಮಿತಿ ಅಧ್ಯಕ್ಷ ಸುರೇಶ್ ನಾಯ್ಕ, ಹಾಗೂ ಸಂಘಟಕರಾದ ಗಣೇಶ ಪೂಜಾರಿ,ಎಂ.ಟಿ.ಹೆಗಡೆ,ನಾಗರಾಜ ಪೂಜಾರಿ,ರಮೇಶ್ ಪೂಜಾರಿ ಸೇರಿದಂತೆ ಶಾಲಾ ಶಿಕ್ಷಕಿಯರಾದ ಸಂಧ್ಯಾ ಭಟ್,ಜ್ಯೋತಿ ದೋಡ್ಮನಿ,ಮಧುಶ್ರೀ ಮರಾಠಿ ಹಾಗೂ ಎಸ್.ಡಿ.ಎಮ್.ಸಿ.ಸದಸ್ಯರು ಹಾಗೂ ಹಳೆ ವಿದ್ಯಾರ್ಥಿಗಳು ಮಕ್ಕಳ ಪಾಲಕರು ಮತ್ತು ಗ್ರಾಮಸ್ಥರು ಭಾಗಿಯಾಗಿದ್ದರು..