Slide
Slide
Slide
previous arrow
next arrow

ವರ್ಗಾವಣೆಗೆ ಆಗ್ರಹಿಸಿ ಸತ್ಯಾಗ್ರಹ: ಧರಣಿನಿರತರನ್ನು ವಶಕ್ಕೆ ಪಡೆದ ಪೋಲಿಸ್

300x250 AD

ಭಟ್ಕಳ: ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ ಹಾಗೂ ಭಟ್ಕಳ ಘಟಕ ವತಿಯಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಧರಣಿ ನಿರತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತಾಲೂಕಾಡಳಿತದಿಂದ ಪ್ರತಿಭಟನೆ ಸ್ಥಳವನ್ನು ಶನಿವಾರ ಸಂಜೆ ಖುಲ್ಲಾ ಪಡಿಸಿದ್ದಾರೆ.

ತಾಲೂಕಾ ಆಡಳಿತದಿಂದ ಪೋಲಿಸ್ ಇಲಾಖೆಗೆ ಪತ್ರ ಬರೆಯಲಾಗಿದ್ದು. ಧರಣಿಗೆ ಅನುಮತಿ ನೀಡಿರುವುದನ್ನು ನಾವು ಈಗ ರದ್ದು ಪಡಿಸಲಾಗಿದ್ದು, ಧರಣಿ ನಡೆಸುತ್ತಿರುವ ಸ್ಥಳವು ತಾಲೂಕಿನ ಕಾನೂನು ಸುವ್ಯವಸ್ಥೆ ಹದಗೆಡುವ ಸಂಭವವಿರುವುದರಿಂದ ಧರಣಿ ತೆರವುಗೊಳಿಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತ್ರ ಉಲ್ಲೇಖಿಸಿದ್ದಾರೆ ಎಂದು ಗ್ರಾಮೀಣ ಠಾಣೆಯ ಸಿ.ಪಿ.ಐ ಚಂದನ್ ಧರಣಿ ನಿರತರಿಗೆ ತಿಳಿಸಿದರು.

ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸಮ್ಮುಖದಲ್ಲಿ ಧರಣಿ ನಿರತರನ್ನು ಪೊಲೀಸ ವಾಹನದಲ್ಲಿ ಬಂಧಿಸಿ ನಗರ ಠಾಣೆಗೆ ಕರೆದೊಯ್ಯಲಾಗಿದೆ.ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

300x250 AD

ಇದಕ್ಕೂ ಪೂರ್ವದಲ್ಲಿ ಸಂಜೆ 4 ಗಂಟೆ ವೇಳೆಗೆ ತಹಶೀಲ್ದಾರ್ ಸ್ಥಳಕ್ಕೆ ಬಂದು ವರ್ಗಾವಣೆ ಮಾಡಲು 2 ತಿಂಗಳ ಕಾಲಾವಕಾಶ ಕೇಳಿ ಅವರ ಸಹಿ ಇರುವ ಲೆಟರ್ ಹೆಡ್ ಇವರು ಪತ್ರ ನೀಡಿದಾಗ ಧರಣಿಕಾರರು ಇದನ್ನು ನಿರಾಕರಿಸಿ ವರ್ಗಾವಣೆ ಪ್ರಕ್ರಿಯೆ ನಿಮ್ಮ ಹಂತದಲ್ಲಿ ನಡೆಯುದಿಲ್ಲ .ನಿಮ್ಮ ಲೆಟರ್ ಹೆಡ್ ನಮಗೆ ಬೇಡ .ಜಿಲ್ಲಾಧಿಕಾರಿಗಳಿಂದ ಪತ್ರ ನೀಡಿದರೆ ಮಾತ್ರ ಧರಣಿ ನಿಲ್ಲಿಸುತ್ತೇವೆ ಎಂದರು. ನಂತರ ಧರಣಿ ಸ್ಥಳವನ್ನು ಪುರಸಭೆ ಮುಖ್ಯಾಧಿಕಾರಿ ಸಮ್ಮುಖದಲ್ಲಿ ಸಿಬ್ಬಂದಿಗಳು ತೆರವು ಗೊಳಿಸಿದರು.

Share This
300x250 AD
300x250 AD
300x250 AD
Back to top