Slide
Slide
Slide
previous arrow
next arrow

ಬಾಲಕಿಯರ ಕಬಡ್ಡಿ ಪಂದ್ಯಾವಳಿ: ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕನ್ಯಾ ವಿದ್ಯಾಲಯ

300x250 AD

ದಾಂಡೇಲಿ : ಪ್ರೌಢಶಾಲಾ ವಿಭಾಗದ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ನಗರದ ಕನ್ಯಾ ವಿದ್ಯಾಲಯ ಪ್ರೌಢಶಾಲೆಯ ಬಾಲಕಿಯರ ತಂಡವು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದೆ.

ಹಳಿಯಾಳ ಪಟ್ಟಣದಲ್ಲಿ ನಡೆದ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕನ್ಯಾ ವಿದ್ಯಾಲಯದ ಬಾಲಕಿಯರ ಕಬಡ್ಡಿ ತಂಡವು ಅತ್ಯುತ್ತಮ ಪ್ರದರ್ಶನವನ್ನು ನೀಡಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.

ಕನ್ಯಾ ವಿದ್ಯಾಲಯ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಮೇಘ ಲಾಂಬೋರೆ, ಸೀತಾ ಪಟಕಾರೆ, ಭಾಗ್ಯಶ್ರೀ ಪಟಕಾರೆ, ಶ್ರೇಯ ಥೋರವತ್, ಯಶೋಧಾ ಬೋಡ್ಕೆ, ಮಹಾಲಕ್ಷ್ನೀ ಬಜಾರಿ, ಗಂಗಿಬಾಯಿ ಪಟಕಾರೆ, ಗಂಗುಬಾಯಿ ಬಾಜಾರಿ, ಭಾಗ್ಯಲಕ್ಷ್ಜೀ ಪಂಗಡೆ ಮತ್ತು ಸವಿತಾ ಸಿಂಗಾಡೆ ಇವರನ್ನೊಳಗೊಂಡ ಕಬಡ್ಡಿ ತಂಡ ಇದೀಗ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಹಾಗೂ ತಾಲೂಕಿಗೆ ಕೀರ್ತಿಯನ್ನು ತಂದಿದೆ. ಇದೇ ಶಾಲೆಯ ಮೇಘಾ ಲಾಂಬೋರೆ ಇವಳು ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

300x250 AD

ಈ ವಿದ್ಯಾರ್ಥಿನಿಯರ ಸಾಧನೆಗೆ ಕನ್ಯಾ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಟಿ.ಆರ್.ಚಂದ್ರಶೇಖರ, ಕಾರ್ಯದರ್ಶಿ ರಾಜೇಂದ್ರ ಕೋಡ್ಕಣಿ, ಖಜಾಂಚಿ ಅರುಣಾದ್ರಿ ರಾವ್‌ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆ, ಶಾಲಾ ಮುಖ್ಯೋಪಾಧ್ಯಾಯರಾದ ಬಿಜು ನಾಯ್ಕ ಮತ್ತು ಶಾಲಾ ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವರ್ಗ ಹರ್ಷವನ್ನು ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Share This
300x250 AD
300x250 AD
300x250 AD
Back to top