ಶಿರಸಿ: ತಾಲೂಕಿನ ಮಂಜುಗುಣಿಯ ಶ್ರೀ ವೇಂಕಟರಮಣ ದೇವಸ್ಥಾನ ಸಹಕಾರದಲ್ಲಿ ಶಬರ ಸಂಸ್ಥೆ ಸೋಂದಾ ಮತ್ತು ಯಕ್ಷಾಭಿಮಾನಿ ಬಳಗ ಮಂಜುಗುಣಿ ಇವರ ಸಂಯೋಜನೆಯಲ್ಲಿ ಶಿರಸಿಯ ಯಕ್ಷ ಕಲಾ ಸಂಗಮದವರಿಂದ ಏಕಾದಶಿ ಸರಣಿ ಕಾರ್ಯಕ್ರಮದ ಪ್ರಯುಕ್ತ ಕೃಷ್ಣಾರ್ಜುನ ತಾಳಮದ್ದಳೆ ಯಶಸ್ವಿಯಾಗಿ ನೆರವೇರಿತು.
ಸುಮಾ ಹೆಗಡೆ ಗಡಿಗೆಹೊಳೆ ಇವರ ನಿರ್ದೇಶನದಲ್ಲಿ, ಮಾತೆಯರಿಂದಲೆ ತಾಳಮದ್ದಳೆ ಪ್ರದರ್ಶಿತಗೊಂಡಿದ್ದು ವಿಶೇಷವಾಗಿತ್ತು. ಪ್ರಾರಂಭದಲ್ಲಿ ಯಕ್ಷಾಭಿಮಾನಿ ಬಳಗದ ಕರುಣಾಕರ ಹೆಗಡೆ ಕಲ್ಲಳ್ಳಿ ಕಲಾವಿದರನ್ನು ಸ್ವಾಗತಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಗಜಾನನ ಭಟ್ ತುಳಗೇರಿ, ಮದ್ದಳೆಯಲ್ಲಿ ಶ್ರೀಪಾದ ಭಟ್ ಮೂಡಗಾರ ಸಹಕರಿಸಿದರು. ಸುಮಾ ಹೆಗಡೆ ಗಡಿಗೆಹೊಳೆ, ಜ್ಯೋತಿ ಹೆಗಡೆ, ಉಷಾ ಭಟ್, ಸಹನಾ ಜೋಶಿ, ಲಲಿತಾ ಶರ್ಮ, ಭವಾನಿ ಭಟ್, ಸುನಂದಾ ಹೆಗಡೆ, ವಿನುತಾ ಹೆಗಡೆ, ಸುನಿತಾ ಹೆಗಡೆ, ವಿಮಲಾ ಭಾಗವತ ತಮ್ಮ ಪಾತ್ರಗಳಿಗೆ ಜೀವ ತುಂಬಿ ಪ್ರೇಕ್ಷಕರನ್ನು ರಂಜಿಸಿದರು. ಶಬರ ಸಂಸ್ಥೆಯ ನಾಗರಾಜ್ ಜೋಶಿ ಸೋಂದಾ ತಾಳಮದ್ದಳೆ ಸರಣಿಯ ಪ್ರಾಮುಖ್ಯತೆಯನ್ನು ವಿವರಿಸಿ ವಂದನಾರ್ಪಣೆ ಮಾಡಿದರು.