ಅಂಕೋಲಾ: ಬೈಕಿಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸುವ ಬರದಲ್ಲಿ ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವನಪ್ಪಿದ್ದಾರೆ.
ಮೃತಪಟ್ಟ ವ್ಯಕ್ತಿ ಹೊಸಗದ್ದೆ ಜನತಾ ಕಾಲೋನಿಯ ಪ್ರಕಾಶ ಸುಭಾಷ ತಳ್ಳೇಕರ್ (53) ಎಂಬುವವರಾಗಿದ್ದು, ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಅಂಕೋಲಾ ಪಟ್ಟಣದಲ್ಲಿ ಅವರ ಅಂಗಡಿಯಿದ್ದು, ಸೆ.11ರಂದು ಜೈಹಿಂದ್ ಸರ್ಕಲ್ ಮಾರ್ಗವಾಗಿ ಲೈಬ್ರೆರಿ ಕ್ರಾಸಿನ ಕಡೆ ಬೈಕಿನಲ್ಲಿ ಹೋಗುತ್ತಿದ್ದಾಗ ಅಡ್ಡ ಬಂದ ಬೀದಿ ನಾಯಿ ತಪ್ಪಿಸುವಾಗ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು.
ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.