ಸಿದ್ದಾಪುರ: ಇಲ್ಲಿನ ಶ್ರೀ ವಿಘ್ನಶ್ವರ ಯುವಕ ಸಂಘ ಕೊಂಡ್ಲಿ, ಮಾರಿಕಾಂಬ ನಗರದ ಯುವಕ ಮಂಡಳಿಯ ಸಾರ್ವಜನಿಕ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಅದ್ದೂರಿ ಮಂಟಪ ನಿರ್ಮಾಣ ಮಾಡಿ ಗಣಪತಿ ಪ್ರತಿಷ್ಠಾಪನೆ, ಗಣಹೋಮ, ಶ್ರೀಸತ್ಯನಾರಾಯಣ ಪೂಜೆ ಮತ್ತು ಅನ್ನ ಸಂತರ್ಪಣೆ ಮಾಡಲಾಯಿತು. ಪ್ರತಿವರ್ಷದಂತೆ ಈ ವರ್ಷವೂ ಕೂಡ ಚಂಡೆ,ಮದ್ದಳೆ,ಡಿಜೆಯೊಂದಿಗೆ ಸಂಘದ ಯುವಕರು ಮತ್ತು ಸಾರ್ವಜನಿಕರೊಂದಿಗೆ ಗಣಪತಿಯನ್ನು ವಿಸರ್ಜನೆ ಮಾಡಲಾಯಿತು.
ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಗಣಪತಿ ವಿಸರ್ಜನೆ
