Slide
Slide
Slide
previous arrow
next arrow

ಹಕ್ಕು ಪ್ರಾಪ್ತವಾಗುವವರೆಗೂ, ಹೋರಾಟದ ಘರ್ಜನೆ ನಿಲ್ಲಿಸದಿರಿ: ಕಾಗೋಡ ತಿಮ್ಮಪ್ಪ

300x250 AD

 ಶಿರಸಿ : ಹೋರಾಟವಿಲ್ಲದೇ, ನ್ಯಾಯವಿಲ್ಲ. ದೇಶದ ಎಲ್ಲಾ ಭೂಮಿ ಹಕ್ಕಿನ ಫಲಶೃತಿಯಲ್ಲಿ ಹೋರಾಟದ ಇತಿಹಾಸವಿದೆ. ಅದರಂತೆ, ಅರಣ್ಯ ಭೂಮಿ ಹಕ್ಕು ಪ್ರಾಪ್ತವಾಗುವವರೆಗೂ, ಹೋರಾಟದ ಘರ್ಜನೆ ನಿಲ್ಲಿಸದ್ದೀರಿ ಅಲ್ಲದೇ,  ಮಲಗಿರುವ ಸರ್ಕಾರವನ್ನು ಎದ್ದೇಳಿಸಿರಿ ಎಂದು ಸಾಮಾಜಿಕ ಚಿಂತಕ ಕಾಗೋಡ ತಿಮ್ಮಪ್ಪ ಅರಣ್ಯವಾಸಿಗಳಿಗೆ ಕರೆ ನೀಡಿದರು.

ಅವರು ಗುರುವಾರ ಶಿರಸಿಯ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ರವೀಂದ್ರ ನಾಯ್ಕ ನೇತೃತ್ವದಲ್ಲಿ ಜರುಗಿದ ಅರಣ್ಯ ಭೂಮಿ ಹಕ್ಕಿನ 33 ವರ್ಷದ ಹೋರಾಟದ ಅಂಗವಾಗಿ ಏರ್ಪಡಿಸಿದ ‘ಅರಣ್ಯ ವಾಸಿಗಳ ಚಿಂತನ’ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಭೂಮಿ ಮಾನವನ ಸಂವಿಧಾನ ಬದ್ಧ ಹಕ್ಕು. ಕಾನೂನು ಬಂದರೂ ಮಂಜೂರಿಯಲ್ಲಿ ವಿಫಲರಾಗಿದ್ದೇವೆ. ಜನಪ್ರತಿನಿಧಿಗಳ ನಿರಾಸಕ್ತಿಗೆ ಇದಕ್ಕೆ  ಕಾರಣವಾಗಿದೆ.  ಹೋರಾಟದೊಂದಿಗೆ  ಕಾನೂನು ಜಾಗೃತವನ್ನು ಮೂಡಿಸಿ ಎಂದು ಅವರು ಮುಂದುವರೆದು ಮಾತನಾಡುತ್ತ ಹೇಳಿದರು.

ಪ್ರಸ್ತಾವಿಕ ಮಾತನ್ನು ಪ್ರಧಾನ ಸಂಚಾಲಕ ಜೆ.ಎಮ್.ಶೆಟ್ಟಿ  ಮಾತನಾಡಿ, ಮುಂದಿನ ದಿನಗಳಲ್ಲಿ ಭೂಮಿ ಹಕ್ಕಿಗಾಗಿ ಕಾನೂನು ಹೋರಾಟ ತೀವ್ರಗೊಳಿಸಲಾಗುವುದೆಂದು ಅವರು ಹೇಳಿದರು.

     ಸಭೆಯಲ್ಲಿ  ರಾಜ್ಯ ಸಂಚಾಲಕಿ ರಂಜಿತಾ ರವೀಂದ್ರ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರ್ವಹಣೆ   ಶಂಕರ ಕೋಡಿಯಾ ಸಭೆಯನ್ನುದ್ದೇಶಿಸಿ ಪಾಡುರಂಗ ನಾಯ್ಕ ಬೆಳೆಕೆ, ಸದಾನಂದ ತಿಗಡಿ, ರಮಾನಂದ ನಾಯ್ಕ ಅಕೋಲ ಅಧ್ಯಕ್ಷ, ಮಾಬ್ಲೇಶ್ವರ್ ನಾಯ್ಕ ಬೇಡ್ಕಣಿ, ಆನಂದ ನಾಯ್ಕ, ರಾಘುವೇಂದ್ರ ಕವಂಚೂರು, ಮುಂತಾದವರು ಮಾತನಾಡಿದ್ದರು. ವೇದಿಕೆಯ ಮೇಲೆ ರಾಜು ನರೇಬೈಲ್, ದೇವರಾಜ ಗೊಂಡ ಭಟ್ಕಳ, ಇಬ್ರಾಹಿಂ ಗೌಡಳ್ಳಿ, ಭೀಮಶಿ ವಾಲ್ಮಿಕಿ, ನೇಹರು ನಾಯ್ಕ, ಎಮ್ ಆರ್ ನಾಯ್ಕ, ಮಹೇಂದ್ರ ನಾಯ್ಕ ಕತಗಾಲ, ಯಾಕೂಬ ಬೆಟ್ಕುಳಿ ಮುಂತಾದವರು ಉಪಸ್ಥಿತರಿದ್ದರು.

300x250 AD

ಸೀಟ್ ಕೇಳಿದರೆ, ದುಡ್ಡಿಲ್ಲ ಅಂದರು:

     ಹಿಂದಿನ ಚುನಾವಣೆ ಸಂದರ್ಭದಲ್ಲಿ ನಿಮ್ಮ ಒತ್ತಾಯಕ್ಕೆ  ಸ್ಪಂದಿಸಿ ನನ್ನ ಸಾಮರ್ಥ್ಯದ ಮೇಲೆ ಚುನಾವಣೆಯಲ್ಲಿ ಟೀಕೆಟ್ ಕೇಳಿದೆ. ಆದರೆ, ರವೀಂದ್ರ ನಾಯ್ಕ ಹತ್ತಿರ ದುಡ್ಡು ಇಲ್ಲ ಎಂದರು. ಹೌದು, ನನ್ನ ಹತ್ತಿರ ಚುನಾವಣೆಗೆ ಖರ್ಚು ಮಾಡುವಷ್ಟು ದುಡ್ಡು ಇಲ್ಲದಿರಬಹುದು. ಆದರೆ, ನೀವಿದ್ದೀರಿ ಅಲ್ಲ. ದುಡ್ಡು ಇಲ್ಲವೆಂದು ಅಪಾದನೆ ಮಾಡಿದವರಿಗೆ, ಮುಂದಿನ ದಿನಗಳಲ್ಲಿ ಸೂಕ್ತ ಸಮಯ, ಸೂಕ್ತ ವೇದಿಕೆಯಲ್ಲಿ ಉತ್ತರಿಸುವೆ ಎಂದು ಆವೇಶದಲ್ಲಿ ರವೀಂದ್ರ ನಾಯ್ಕ ಹೇಳಿದಾಗ ಕಿಕ್ಕಿರಿದ್ದು ತುಂಬಿದ ಅರಣ್ಯವಾಸಿಗಳಿಂದ ಸಭೆಯಲ್ಲಿ  ಹರ್ಷೋದ್ಗಾರ ವ್ಯಕ್ತವಾದವು.

Share This
300x250 AD
300x250 AD
300x250 AD
Back to top