Slide
Slide
Slide
previous arrow
next arrow

ಶಾಂತಿ- ಸುವ್ಯವಸ್ಥೆ ಜಾಗೃತಿ ಮೂಡಿಸಲು ಪೋಲಿಸರಿಂದ ಪಥ ಸಂಚಲನ

300x250 AD

ಶಿರಸಿ: ಈದ ಮಿಲಾದ್ ಮತ್ತು ಗಣೇಶನ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಗರದಲ್ಲಿ ಪೊಲೀಸರಿಂದ ಪಥ ಸಂಚಲನ ನಡೆಸಲಾಯಿತು.

ನಗರದ ಹಳೆ ಬಸ್ ನಿಲ್ದಾಣ ವೃತ್ತದಿಂದ ಆರಂಭವಾದ ಪಥಸಂಚಲನವು ಮಾರಿಗುಡಿ ಕ್ರಾಸ್- ಡ್ರೈವರ್ ಕಟ್ಟೆ- ಶಿವಾಜಿ ಚೌಕ-ಸಿಪಿ ಬಜಾರ-ದೇವಿಕೆರೆ, ನಟರಾಜ ರಸ್ತೆ- ಹೊಸಪೇಟೆ ರಸ್ತೆ-ಅಶ್ವಿನಿ ಸರ್ಕಲ್ ಮೂಲಕ ಯಲ್ಲಾಪುರ ರಸ್ತೆ ಮಹಾಸತಿ ಸರ್ಕಲ್‌ವರೆಗೆ ಮಾಡಿ ಮುಕ್ತಾಯಗೊಂಡಿತು.ಈದ್ ಮಿಲಾದ್ ಮತ್ತು ಗಣೇಶನ ಮೂರ್ತಿ ವಿಸರ್ಜನೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಮಾಡಲಾಯಿತು. ಶಿರಸಿ ವೃತ್ತದ ಮಾರುಕಟ್ಟೆ, ಶಿರಸಿ ನಗರ, ಮಾರುಕಟ್ಟೆ, ಗ್ರಾಮೀಣ ಹಾಗೂ ಬನವಾಸಿ ಠಾಣೆಯ ಪೊಲೀಸ್ ಸಿಬ್ಬಂದಿಗಳು, ಕರ್ನಾಟಕ ಶಸಸ್ತ್ರ ಮೀಸಲು ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಗಳು ಹಾಗೂ ನಿರ್ಭಯಾ ತಂಡ ಈ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. ಡಿಎಸ್.ಪಿ ಕೆ.ಎಲ್.ಗಣೇಶ, ಸಿಪಿಐ ಶಶಿಕಾಂತ ವರ್ಮಾ, ಗ್ರಾಮೀಣ ಠಾಣೆ ಪಿ.ಐ ಸೀತಾರಾಮ. ಪಿ, ನಗರ ಠಾಣೆ ಪಿ.ಎಸ್.ಐ ನಾಗಪ್ಪ.ಬಿ, ತನಿಖಾ ಪಿಎಸ್.ಐ ಮಹಾಂತೇಶ ಕುಂಬಾರ, ಮಾರುಕಟ್ಟೆ ಠಾಣೆ ಪಿ.ಎಸ್.ಐ ರತ್ನಾ ಕುರಿ, ತನಿಖಾ ಪಿ.ಎಸ್.ಐ ರಾಜಕುಮಾರ ಉಕ್ಕಲಿ, ಬನವಾಸಿ ಠಾಣೆ ತನಿಖಾ ಪಿ.ಎಸ್.ಐ ಸುನೀಲಕುಮಾರ ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top