Slide
Slide
Slide
previous arrow
next arrow

ಜಿಲ್ಲಾ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ

300x250 AD

ಕಾರವಾರ: ಪ್ರಸಕ್ತ ಸಾಲಿನ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯ ಉದ್ಘಾಟನೆ ಕಾರ್ಯಕ್ರಮ ಸೆ.19 ರಂದು ಬೆಳಗ್ಗೆ 9 ಗಂಟೆಗೆ ಶ್ರೀ ದಿವಂಗತ ಡಿ. ಜಿ. ಸಾವಂತ ಸಭಾಭವನ ನಿವೃತ್ತಿ ನೌಕರ ಸಂಘ ವಾಮನ ಆಶ್ರಮ ರಸ್ತೆ ಕಾರವಾರ ಆಯೋಜಿಸಲಾಗಿದೆ
ಕ್ರೀಡಾ ಸ್ಪರ್ಧೆಯನ್ನು ಮಾಲಾದೇವಿ ಕ್ರೀಡಾಂಗಣದಲ್ಲಿ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಶ್ರೀ ದಿವಂಗತ ಡಿ. ಜಿ. ಸಾವಂತ ಸಭಾಭವನ ನಿವೃತ್ತಿ ನೌಕರ ಸಂಘ ವಾಮನ ಆಶ್ರಮ ರಸ್ತೆ ಕಾರವಾರದಲ್ಲಿ ನಡೆಯಲಿದೆ.
ಕ್ರೀಡಾ ಸ್ಪರ್ಧೆಯಲ್ಲಿ ಬಿರುಸಿನ ನಡಿಗೆ, ಬಕೆಟ್‌ನಲ್ಲಿ ಬಾಲ್ ಎಸೆಯುವುದು, ಮ್ಯೂಸಿಕಲ್ ಚೇರ್, ಗುಂಡು ಏಸೆತ ಹಾಗೂ ಸಾಂಸ್ಕçತಿಕ ಸ್ಪರ್ಧೆಯಲ್ಲಿ ಏಕಪಾತ್ರಭಿನಯ, ಗಾಯನ ಸ್ಪರ್ಧೆ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ವಯೋಮಿತಿವಾರು (60-69, 70-79 ಹಾಗೂ ಮೇಲ್ಪಟ್ಟು) ಪುರುಷ ಮತ್ತು ಮಹಿಳೆಯರಿಗೆ ಸ್ಪರ್ಧೆ ನಡೆಯಲಿದೆ. ಗಾಯನಕ್ಕೆ ಮ್ಯೂಸಿಕನ್ನು (ಕರೋಕಿ) ಬಳಸುವಂತಿಲ್ಲ. ಹಾಗೂ ಚಿತ್ರಕಲೆಗೆ ಬೇಕಾಗುವ ಲೇಖನ ಹಾಗೂ ಇತರೆ ಸಾಧನಗಳನ್ನು ಅಭ್ಯರ್ಥಿಗಳೇ ತರುವುದು, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ಏರ್ಪಡಿಸಿಲಾಗುವುದು.
ಭಾಗವಹಿಸಲು ಇಚ್ಛಿಸುವ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ತಮ್ಮ ವಯಸ್ಸಿನ ಗುರುತಿನ ಚೀಟಿಯೊಂದಿಗೆ ನೋಂದಣಿಯನ್ನು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕಾರವಾರ ಕಚೇರಿಯಲ್ಲಿ ಅಥವಾ ದೂರವಾಣಿ ಸಂಖ್ಯೆ Tel:+918762232827 ಗೆ ಸೆ.18 ರೊಳಗೆ ವಯಸ್ಸಿ ಗುರುತಿನ ಚೀಟಿಯೊಂದಿಗೆ ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ಸಬಲೀಕರಣಾಧಿಕಾರಿ ರಾಘವೇಂದ್ರ ಜಿ. ಭಟ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top