Slide
Slide
Slide
previous arrow
next arrow

ನಾಗಮಂಗಲದ ಗಣೇಶೋತ್ಸವ ಮೆರವಣಿಗೆ ವೇಳೆ ಮತಾಂಧರಿಂದ ಹಲ್ಲೆ

300x250 AD

‘ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮಕೈಗೊಳ್ಳಿ, ಅನ್ಯ ಗಣೇಶೋತ್ಸವಗಳಿಗೆ ಭದ್ರತೆ ಒದಗಿಸಿ’

ಮಂಡ್ಯ: ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ನಡೆಯುತ್ತಿದ್ದ ಗಣೇಶೋತ್ಸವ ಮೆರವಣಿಗೆಯ ಮೇಲೆ ಸೆ.11, ಬುಧವಾರ ರಾತ್ರಿ ಮತಾಂಧರು ಕಲ್ಲು ತೂರಾಟ ಮಾಡಿದ್ದು, ಅಂಗಡಿ-ಮನೆ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಅಷ್ಟೇ ಅಲ್ಲದೆ ಮತಾಂಧರು ಮಸೀದಿಯಿಂದ ಮಾರಕಾಸ್ತ್ರಗಳನ್ನು ಹೊರತಂದು ಅತ್ಯಂತ ಭೀಕರ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ. ಮತಾಂಧರ ಈ ನಡೆಯನ್ನು ನೋಡಿದಾಗ ಈ ದಾಳಿ ಸಂಪೂರ್ಣ ಪೂರ್ವ ನಿಯೋಜಿತವಾಗಿದ್ದು ಗಲಭೆ ಸೃಷ್ಠಿಸಲೆಂದೇ ಈ ಕೃತ್ಯ ಎಸಗಲಾಗಿದೆ ಎಂಬುದು ಬೆಳಕಿಗೆ ಬರುತ್ತದೆ. ಈ ಘಟನೆಯನ್ನು ಹಿಂದೂ ಜನಜಾಗೃತಿ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಹಿಂದೂ ಜನಜಾಗೃತಿ ಸಮಿತಿ  ರಾಜ್ಯ ಸಮನ್ವಯಕ ಗುರುಪ್ರಸಾದ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರ ಸಮ್ಮುಖದಲ್ಲೂ ಇಂತಹ ದೊಡ್ಡ ಮಟ್ಟದ ಹಲ್ಲೆ ನಡೆದಿರುವುದು ನಾಚಿಕೆಗೀಡು ಮಾಡಿದೆ. ಪೊಲೀಸರು ಅತಿ ಶೀಘ್ರದಲ್ಲಿ ವಶಕ್ಕೆ ಪಡೆದವರಲ್ಲಿ ಕೃತ್ಯಕ್ಕೆ ಕಾರಣಕರ್ತರಾದವರ ಮೇಲೆ ಕೂಡಲೇ ಕ್ರಮಕೈಗೊಳ್ಳಬೇಕು ಮತ್ತು ರಾಜ್ಯಾದ್ಯಂತ ಇನ್ನೂ ಅನೇಕ ಜಿಲ್ಲೆಗಳಲ್ಲಿ ಗಣೇಶ ವಿಸರ್ಜನೆ ಬಾಕಿ ಇದ್ದು ಎಲ್ಲ ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆ ಇಂತಹ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕೆಂದು ಸಮಿತಿಯು ಆಗ್ರಹಿಸಿದೆ.

300x250 AD

ಘಟನೆ ಬಗ್ಗೆ ಗೃಹ ಸಚಿವ ಡಾ. ಪರಮೇಶ್ವರ ಇವರು ಈ ಘಟನೆ ಆಕಸ್ಮಿಕವಾಗಿದ್ದು ಯಾವುದೇ ದೊಡ್ಡ ಮಟ್ಟದ ಗಾಯ, ಜೀವಹಾನಿಯಾಗಿಲ್ಲ, ಇದನ್ನು ಇಲ್ಲಿಗೆ ನಿಲ್ಲಿಸಿಬಿಡೋಣ ಎಂದು ಪ್ರತಿಕ್ರಿಯಿಸಿದ್ದಾರೆ. ಗೃಹ ಸಚಿವರ ಈ ಹೇಳಿಕೆ ಅತ್ಯಂತ ಬೇಜವಾಬ್ದಾರಿಯಿಂದ ಕೂಡಿದೆ. ಇಂಥ ಹೇಳಿಕೆಗಳಿಂದಲೇ ಮತಾಂಧರಿಗೆ ಕುಮ್ಮಕ್ಕು ಸಿಗುತ್ತದೆ. ಸಮಿತಿ ಗೃಹ ಸಚಿವರ ಹೇಳಿಕೆಯನ್ನು ತೀವ್ರ ಶಬ್ದಗಳಲ್ಲಿ ಖಂಡಿಸುತ್ತದೆ. ಜೊತೆಗೆ ಮತಾಂಧರಿಂದ ಕಲ್ಲು ತೂರಾಟವಾಗಿರುವಾಗಲೂ ಗಣೇಶ ಮಂಡಳಿಯ ಸದಸ್ಯರನ್ನು ಬಂಧಿಸಿರುವುದು ಪುನಃ ಕಾಂಗ್ರೆಸ್ ನ ಓಲೈಕೆ ನೀತಿಯನ್ನು ಎತ್ತಿ ತೋರಿಸುತ್ತದೆ. ಗೃಹ ಸಚಿವರು ಶಿವಮೊಗ್ಗದ ಈದ್ ಮಿಲಾದ್ ವೇಳೆ ಗಲಭೆಯಾದಾಗಲೂ ಇದೇ ರೀತಿ ಆಕಸ್ಮಿಕ ಘಟನೆ ಎಂದಿದ್ದರು. ಈಗ ಪುನಃ ಇದೇ ರೀತಿ ಹೇಳಿಕೆ ನೀಡಿದ್ದು ಜನತೆಯ ಕೋಪಕ್ಕೆ ಗುರಿಯಾಗಿದ್ದಾರೆ ಎಂದಿದ್ದಾರೆ.

Share This
300x250 AD
300x250 AD
300x250 AD
Back to top