Slide
Slide
Slide
previous arrow
next arrow

ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್: ಮಳಗಿ ನವೋದಯ ವಿದ್ಯಾರ್ಥಿಗಳು ಪ್ರಥಮ

300x250 AD

.ಬನವಾಸಿ: ಹರಿಯಾಣದ ಅಂಬಾಲಾದಲ್ಲಿ ಜರುಗಿದ ಪಿಎಂ ಶ್ರೀ ಜವಾಹರ್ ನವೋದಯ ವಿದ್ಯಾಲಯಗಳ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಬನವಾಸಿಯ ಪ್ರತಿಜ್ಞಾ ಎಂ. ಹಾಗೂ ಚಿನ್ಮಯ ಡಿ. ಇವರು ಡಬಲ್ಸ್‌ನಲ್ಲಿ ಉತ್ತರ ಪ್ರದೇಶವನ್ನು ಮಣಿಸುವ ಮೂಲಕ ಪ್ರಥಮ ಸ್ಥಾನವನ್ನು ಗಳಿಸಿ ರಾಜ್ಯಕ್ಕೆ ಹೆಸರು ತಂದಿದ್ದಾರೆ.

ಕರ್ನಾಟಕದಿಂದ ಇವರು ಮಧ್ಯಪ್ರದೇಶದ ನರ್ಮದಾಪುರಂನಲ್ಲಿ ನಡೆಯುವ ಎಸ್‌ಜಿಎಫ್‌ಐ (ಸ್ಟೂಡೆಂಟ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ) ಕೂಟದಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದಿದ್ದಾರೆ. ಅಂಡರ್ ಸೆವೆಂಟೀನ್ ವಿಭಾಗದಲ್ಲಿ ಜರುಗಿದ ಬ್ಯಾಡ್ಮಿಂಟನ್ ಸಿಂಗಲ್ ಹಾಗೂ ಡಬಲ್ಸ್ ನಲ್ಲಿ ಕರ್ನಾಟಕ ಚಾಂಪಿಯನ್ ಆಗುವ ಮೂಲಕ ಹೆಸರು ಗಳಿಸಿದೆ. ಚಿನ್ಮಯಿ ಡಿ. ಸಿಂಗಲ್ಸ್ ನಲ್ಲಿ ಮಿಂಚಿದ್ದಾರೆ. ಮಕ್ಕಳ ಈ ಸಾಧನೆಯನ್ನು ಪಿಎಂ ಶ್ರೀಜವಾಹರ್ ನವೋದಯ ವಿದ್ಯಾಲಯ ಮಳಗಿ ಉತ್ತರ ಕನ್ನಡ ಪ್ರಾಂಶುಪಾಲರಾದ ಪ್ರೊ ಅಶೋಕನ್, ಶಿಕ್ಷಕ ವೃಂದ, ಪಿಟಿಸಿ ಮಂಡಳಿ ಹರ್ಷ ವ್ಯಕ್ತಪಡಿಸಿದೆ. ವಿದ್ಯಾರ್ಥಿನಿ ಪ್ರತಿಜ್ಞಾ ಇವಳು ಬನವಾಸಿಯ ಮಾರುತಿ ಮಂಜುಳಾ ಉಪ್ಪಾರ್ ಶಿಕ್ಷಕ ದಂಪತಿಗಳ ಮಗಳಾಗಿದ್ದರೆ, ಚಿನ್ಮಯ ಡಿ. ಇವಳು ತ್ರಿವೇಣಿ ದಯಾನಂದ ದಾವಣಗೆರೆ ದಂಪತಿಗಳ ಪುತ್ರನಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top