Slide
Slide
Slide
previous arrow
next arrow

ನಾಗೋಡಾ ಸೇತುವೆ ಸಂಪರ್ಕ ರಸ್ತೆ ಜಲಾವೃತ

300x250 AD

ಜೋಯಿಡಾ : ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗೋಡಾ, ಪಾಂಜೇಲಿ ಗ್ರಾಮಗಳಿಗೆ ಸಂಪರ್ಕದ ಕೊಂಡಿಯಾಗಿರುವ ನಾಗೋಡಾ ಸೇತುವೆಯ ಸಂಪರ್ಕ ರಸ್ತೆ ಸೂಪಾ ಹಿನ್ನೀರಿನಲ್ಲಿ ಜಲಾವೃತಗೊಂಡಿದ್ದು, ಸ್ಥಳೀಯ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಸೇತುವೆಯ ಸಂಪರ್ಕ ರಸ್ತೆ ಎರಡೂ ಬದಿಯಲ್ಲೂ ಹಿನ್ನೀರಿನ ಸಾಮಾನ್ಯ ಮಟ್ಟಕ್ಕಿಂತಲೂ ತೀರಾ ಕೆಳಗಡೆ ಇರುವುದರಿಂದ ಈ ಸಂಪರ್ಕ ರಸ್ತೆ ಪ್ರತಿವರ್ಷ ಜಲಾವೃತವಾಗಲು ಕಾರಣವಾಗಿದೆ. ಈ ಸೇತುವೆ ನಾಗೋಡಾ, ಪಾಂಜೇಲಿ, ದುಪೇವಾಡಿ, ಪತ್ರೆ ಮುಂತಾದ ಗ್ರಾಮಕ್ಕೆ ಹಿನ್ನಿರಿನಿಂದ ಸಾಗಿಹೋಗಲು ನಿರ್ಮಿಸಿರುವ ಸೇತುವೆಯಾಗಿದೆ. ಕಳೆದ ಮೂರು ನಾಲ್ಕು ದಿನಗಳಿಂದ ನಾಗೋಡಾ ಸೇತುವೆಯ ಸಂಪರ್ಕ ರಸ್ತೆ ಜಲಾವೃತಗೊಂಡಿದ್ದು, ಸ್ಥಳೀಯ ಜನತೆ ಪರದಾಡುವಂತಾಗಿದೆ.

300x250 AD
Share This
300x250 AD
300x250 AD
300x250 AD
Back to top