ಭಟ್ಕಳ: ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಇಲಾಖಾ ಕ್ರೀಡಾಕೂಟವು ಗೊರಟೆ ಸರಕಾರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆಯಿತು.
ಬಾಲಕರ ಮತ್ತು ಬಾಲಕಿಯರ ಖೋಖೊ ಸ್ಪರ್ಧೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೆಮಡಿಯು ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಸತತವಾಗಿ ಎರಡನೇ ಬಾರಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಯಿತು.
ಬಾಲಕಿಯರ 600 ಮೀಟರ್ ಓಟದಲ್ಲಿ ಸೀಮಾ ನಾಯ್ಕ್ ತೃತೀಯ ಸ್ಥಾನವನ್ನು ಮತ್ತು ಬಾಲಕರ ರಿಲೇ ತಂಡವು (ಸಮರ್ಥ್ ನಾಯ್ಕ್, ಸೃಜನ್ ನಾಯ್ಕ್, ಕಾರ್ತಿಕ ನಾಯ್ಕ್ ಧೀರಜ್ ಮೊಗೇರ್) ದ್ವಿತೀಯ ಸ್ಥಾನ ಮತ್ತು 200 ಮೀಟರ್ ಓಟದಲ್ಲಿ ಸುಪ್ರಿತಾ ನಾಯ್ಕ್ ದ್ವಿತೀಯ ಸ್ಥಾನವನ್ನು ಪಡೆದು ಶಾಲೆಗ ಕೀರ್ತಿ ತಂದಿರುತ್ತಾರೆ.ಈ ಮೊದಲು ನಡೆದ ಕೋಣಾರ ವಲಯ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಈ ಶಾಲೆಯು ಸಮಗ್ರ ವೀರಾಗ್ರಣಿ ಶಾಲೆ ಎಂಬ ಪ್ರಶಸ್ತಿಯನ್ನು ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.
ಹಳೆಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಚಾಂಪಿಯನ್ ಆಗಿ ಜಿಲ್ಲಾ ಮಟ್ಟಕ್ಕೆ ಅರ್ಹತೆಯನ್ನು ಪಡೆದುಕೊಂಡ ಬಾಲಕರ ಮತ್ತು ಬಾಲಕಿಯರ ತಂಡಗಳಿಗೆ ಮತ್ತು ತರಬೇತುಗೊಳಿಸಿದ ದೈಹಿಕ ಶಿಕ್ಷಕರಿಗೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರು ಮತ್ತು ಮುಖ್ಯಶಿಕ್ಷಕರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.