ಶಿರಸಿ: ಅರಣ್ಯವಾಸಿಗಳ ಮುಂದಿನ ಹೋರಾಟದ ನಡೆ ಕುರಿತು ಸೆ.12ರ ಮುಂಜಾನೆ 10 ಗಂಟೆಗೆ ಶಿರಸಿ ಮಾರಿಕಾಂಬಾ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಮುಂದಿನ ಹೋರಾಟದ ಕುರಿತು ಚರ್ಚಿಸಲು “ಜಿಲ್ಲಾ ಮಟ್ಟದ ಚಿಂತನಾ ಸಭೆ” ಕರೆಯಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಣ್ಯ ಭೂಮಿ ಹೋರಾಟ ಪ್ರಾರಂಭವಾಗಿ ಸೆ.12 ಹೋರಾಟಕ್ಕೆ 33 ವರ್ಷವಾಗಿರುವ ಹಿನ್ನಲೆಯಲ್ಲಿ ಚಿಂತನ ಕೂಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 85 ಸಾವಿರ ಅರಣ್ಯವಾಸಿಗಳ ಕುಟುಂಬಗಳಿದ್ದು, ಕೇವಲ 1852 ಕುಟುಂಬಗಳಿಗೆ ಮಾತ್ರ ಮಾನ್ಯತೆ ದೊರಕಿದೆ. ಸುಪ್ರೀಂ ಕೋರ್ಟನಲ್ಲಿ ಮತ್ತು ರಾಜ್ಯ ಸರ್ಕಾರದ ಅರಣ್ಯ ಸಚಿವರು ಒಕ್ಕಲೇಬ್ಬಿಸುವ ಕುರಿತು ನೀಡುವ ವಿಚಾರದ ಕುರಿತು ಹೋರಾಟಗಾರರ ವೇದಿಕೆ ಚಿಂತನ ಸಭೆಯಲ್ಲಿ ಚರ್ಚಿಸಿ ಮುಂದಿನ ಹೋರಾಟದ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಆಸಕ್ತ ಅರಣ್ಯ ಅತಿಕ್ರಮಣದಾರರು ಆಗಮಿಸಲು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ಕೋರಿದ್ದಾರೆ.