ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂನಲ್ಲಿ 16 ವರ್ಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಶನಿವಾರ ನಿವೃತ್ತಿಹೊಂದಿದ ಶಿವಾಜಿ ಎಸ್.ಸಾಗರೇಕರ್ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಗ್ರಾಪಂ ಸಭಾಂಗಣದಲ್ಲಿ ಜರುಗಿತು.
ತಾಪಂ ಕಾರ್ಯನಿರ್ವಹಣಾಧಿಕಾರಿ ದೇವರಾಜ ಎಂ. ಹಿತ್ತಲಕೊಪ್ಪ ಮಾತನಾಡಿ ಪ್ರಾಮಾಣಿಕತೆ ,ಸಮಯ ಪ್ರಜ್ಞೆ, ನಿಷ್ಠೆ, ಶಿಸ್ತು , ತಾಳ್ಮೆ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜ ಅಂಥವರನ್ನು ಗೌರವಿಸುತ್ತದೆ. ನಿವೃತ್ತಿಹೊಂದಿದ ಎಸ್. ಎಸ್. ಸಾಗರೇಕರ್ ತಮ್ಮ ವೃತ್ತಿ ಜೀವನದಲ್ಲಿ ಇವುಗಳನ್ನು ಅಳವಡಿಸಿಕೊಂಡಿದ್ದು ಅವರ ಜನಪ್ರಿಯತೆಗೆ ಕಾರಣವಾಗಿದೆ ಎಂದು ಹೇಳಿದರು.
ಗ್ರಾಪಂ ಉಪಾಧ್ಯಕ್ಷ ಸಿದ್ದಾರ್ಥ ಗೌಡರ್, ಸದಸ್ಯರಾದ ಅನಂತ ಹೆಗಡೆ, ಅಶೋಕ ನಾಯ್ಕ, ಗೋಪಾಲ ದೇವಾಡಿಗ, ಪಿಡಿಒ ರಾಜೇಶ ನಾಯ್ಕ,ಗ್ರಾಪಂ ಮಾಜಿ ಅಧ್ಯಕ್ಷರಾದ ಡಾ.ರವೀಂದ್ರ ಹೆಗಡೆ, ಸೀಮಾ ಎಂ.ಹೆಗಡೆ, ಉಪಾಧ್ಯಕ್ಷ ಎ.ಜಿ.ಹೆಗಡೆ, ಸದಸ್ಯರಾದ ಮಧುಕೇಶ್ವರ ಹೆಗಡೆ, ಪ್ರೇಮಾ ನಾಯ್ಕ, ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್, ಸ್ಥಳೀಯ ಪ್ರಮುಖರಾದ ಅನಂತ ಶಾನಭಾಗ ರಮೇಶ ಹೆಗಡೆ ಹಾರ್ಸಿಮನೆ, ನೂರ್ಲಾಮಿನ್ ಸಾಬ್ ಇತರರು ಮಾತನಾಡಿದರು.
ಗ್ರಾಪಂನಿಂದ ಹಾಗೂ ಸಾರ್ವಜನಿಕರಿಂದ ಗೌರವ ಸ್ವೀಕರಿಸಿ ಶಿವಾಜಿ ಎಸ್.ಸಾಗರೇಕರ್ ಮಾತನಾಡಿದರು.ಗ್ರಾಪಂ ಅಧ್ಯಕ್ಷೆ ಹನುಮಕ್ಕ ಭೋವಿ ಅಧ್ಯಕ್ಷತೆವಹಿಸಿದ್ದರು, ಗ್ರಾಪಂ ಸದಸ್ಯರುಗಳು ಉಪಸ್ಥಿತರಿದ್ದರು.
ಅನಂತ ಹೆಗಡೆ ಹೊಸಗದ್ದೆ ಸ್ವಾಗತಿಸಿದರು, ಶಿಕ್ಷಕ ನಾಗರಾಜ ಮಡಿವಾಳ ಕಾರ್ಯಕ್ರಮ ನಿರ್ವಹಿಸಿದರು.