Slide
Slide
Slide
previous arrow
next arrow

ಅಧಿಕಾರಕ್ಕೆ ಅಂಟಿಕೊಳ್ಳದೇ, ಸೈದ್ದಾಂತಿಕ ನಿಲುವನ್ನು‌ ಪ್ರತಿಪಾದಿಸುತ್ತಿದ್ದವರು ‘ದಿ. ರಾಮಕೃಷ್ಣ ಹೆಗಡೆ’

300x250 AD

ದಿ.ರಾಮಕೃಷ್ಣ ಹೆಗಡೆ ಜನ್ಮದಿನ: ‘ಹೆಗಡೆ ಮತ್ತು ಜಾತ್ಯತೀತತೆ’ ಉಪನ್ಯಾಸ ಯಶಸ್ವಿ

ಸಿದ್ದಾಪುರ: ರಾಜಕೀಯ ಸೈದ್ಧಾಂತಿಕ ನಿಲುವನ್ನು ಪ್ರತಿಪಾದಿಸುತ್ತ ಮುನ್ನಡೆದು, ಸೋಲನ್ನು ಗೆಲುವಿನ ಶಕ್ತಿಯನ್ನಾಗಿ ಪರಿವರ್ತಿಸುವ ಶಕ್ತಿ ರಾಮಕೃಷ್ಣ ಹೆಗಡೆಯವರದ್ದಾಗಿತ್ತು ಎಂದು ಹಿರಿಯ ಸಾಹಿತಿ ಮಹಾಬಲಮೂರ್ತಿ ಕೊಡ್ಲಕೆರೆ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಚೇತನಾ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಸಭಾಭವನದಲ್ಲಿ ಶಿಕ್ಷಣ ಪ್ರಸಾರಕ ಸಮಿತಿ ಹಾಗೂ ರಾಮಕೃಷ್ಣ ಹೆಗಡೆ ಚಿರಂತನ ಸಂಸ್ಥೆಯವರು ರಾಮಕೃಷ್ಣ ಹೆಗಡೆ ಅವರ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಿದ್ದ ಹೆಗಡೆ ಮತ್ತು ಜಾತ್ಯತೀತತೆ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದ ಉಪನ್ಯಾಸಕರಾಗಿ ಭಾಗವಹಿಸಿ ಗುರುವಾರ ಮಾತನಾಡಿದರು. ರಾಮಕೃಷ್ಣ ಹೆಗಡೆ ರಾಜಕೀಯದಲ್ಲಿ ಪ್ರಭಾವಿಗಳಾಗಿದ್ದಾಗ ವಿವಿಧ ರಂಗದಲ್ಲಿದ್ದರು, ವಿವಿಧ ಧರ್ಮಗಳ, ಜಾತಿಯ ಮತ್ತು ವೈಚಾರಿಕತೆಯ ಪ್ರತಿಭೆಗಳನ್ನು ರಾಜಕೀಯಕ್ಕೆ ಪರಿಚಯಿಸಿದರು. ಆದರೆ ಅಧಿಕಾರಕ್ಕಾಗಿ ರಾಮಕೃಷ್ಣ ಹೆಗಡೆ ಅವರು ಯಾವತ್ತೂ ಅಂಟಿಕೊಂಡಿರಲಿಲ್ಲ. ಇಂದಿಗೂ ಜನ ರಾಜಕೀಯ ವಿಶ್ಲೇಷಣೆಗಳನ್ನು ಹೆಗಡೆಯವರ ವೈಚಾರಿಕತೆಯೊಂದಿಗೆ ತುಲನೆ ಮಾಡಿ ನೋಡುತ್ತಾರೆ ಎನ್ನುವುದು ಹೆಗಡೆಯವರ ವೈಚಾರಿಕತೆ, ಆಡಳಿತ ವೈಖರಿ ಇಂದಿಗೂ ಜನಮಾನಸದಲ್ಲಿ ಎಷ್ಟು ಪ್ರಭಾವ ಬೀರಿದೆ ಎಂಬುದನ್ನು ತಿಳಿಸುತ್ತದೆ. ಹೆಗಡೆಯವರು ಜಾತ್ಯತೀತತೆಯನ್ನು ತಮ್ಮ ಅಂತರಂಗದ ಶಕ್ತಿಯನ್ನಾಗಿರಿಸಿದ್ದರು. ಕೆನರಾ ಕ್ಷೇತ್ರದಲ್ಲಿ ಹೆಗಡೆಯವರು ಸೋಲಲು ಅವರ ಜಾತ್ಯತೀತ ನಿಲುವು ಕೂಡ ಕಾರಣವಾಗಿತ್ತು. ಹೆಗಡೆ ಅವರು ಏನ್ನನ್ನೆ ಹೇಳುವುದಿದ್ದರೂ ಸೈದ್ದಾಂತಿಕವಾಗಿರುತ್ತಿತ್ತು. ರಾಜ್ಯ ಹಾಗೂ ದೇಶದ ಜನತೆ ಮಾತ್ರ ಅಲ್ಲ ವಿದೇಶದವರು ರಾಮಕೃಷ್ಣ ಹೆಗಡೆ ಅವರ ವ್ಯಕ್ತಿತ್ವ ಹಾಗೂ ಅವರ ರಾಜಕೀಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು ಎಂದು ಹೇಳಿದರು.

300x250 AD

ಅಧ್ಯಕ್ಷತೆವಹಿಸಿ ಮಾತನಾಡಿದ ರಾಮಕೃಷ್ಣ ಹೆಗಡೆ ಚಿರಂತನದ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ ದೊಡ್ಮನೆ ತಾತ್ವಿಕ ಮತ್ತು ಮೌಲ್ಯಾಧಾರಿತ ರಾಜಕಾರಣದ ಮಾತು ಬಂದಾಗಲೆಲ್ಲ ಹಾಗೂ ವೈಚಾರಿಕ ಶುದ್ಧ, ಪಾರದರ್ಶಕ, ಪರಿಣಾಮಕಾರಿ, ಜನಸ್ನೇಹಿ ಆಡಳಿತದ ಪ್ರಸ್ತಾಪವಾದಾಗಲೆಲ್ಲ ನೆನಪಾಗುವವರು ಹೆಗಡೆಯವರು ಎಂದು ಹೇಳಿದರು. ಈ ವೇಳೆ ಹೆಗಡೆಯವರ ಅಭಿಮಾನಿಗಳಾದ ಹಿರಿಯ ಸಹಕಾರಿ ಹಾಗೂ ಶಿರಸಿ ಟಿಎಂಎಸ್ ಅಧ್ಯಕ್ಷ ಜಿ. ಟಿ. ಹೆಗಡೆ ತಟ್ಟಿಸರ ಮತ್ತು ದೇವಿದಾಸ ಶೇಟ್ ಹಾಳದಕಟ್ಟಾ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಶಿಕ್ಷಣ ಪ್ರಸಾರಕ ಸಮಿತಿ ಚೇರಮನ್ ವಿನಾಯಕರಾವ್ ಜಿ.ಹೆಗಡೆ ಉಪಸ್ಥಿತರಿದ್ದರು.
ಯಲ್ಲಾಪುರದ ಶ್ರೇಯಾ ಭಟ್ಟ ರಚಿಸಿದ ರಾಮಕೃಷ್ಣ ಹೆಗಡೆ ಅವರ ಭಾವಚಿತ್ರದ ಅನಾವರಣದ ಮೂಲಕ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
ಶ್ರೀಪಾದ ಹೆಗಡೆ ಪ್ರಾರ್ಥನೆ ಹಾಡಿದರು. ಡಾ.ಶಶಿಭೂಷಣ ಹೆಗಡೆ ಸ್ವಾಗತಿಸಿದರು. ಜಿ.ಕೆ.ಭಟ್ಟ ಕಶಿಗೆ ವಂದಿಸಿದರು. ಶಿಕ್ಷಕ ಟಿ .ಎನ್. ಭಟ್ಟ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top