ಹೊನ್ನಾವರ: ಇಡಗುಂಜಿಯ ಶ್ರೀ ವಿನಾಯಕ ದೇವಾಲಯದಲ್ಲಿ ತಾತ್ಕಾಲಿಕವಾಗಿ ಗೌರವಧನದ ಮೇಲೆ ಕೆಲಸ ಮಾಡಲು ಮಣಿಗಾರರು, ಗುಮಾಸ್ತರು, ಮುಖ್ಯ ಅಡುಗೆ ತಯಾರಕರು, ಸಹಾಯಕ ಅಡುಗೆಯವರು ಕಂ ಊಟ ಬಡಿಸುವವರು, ಭದ್ರತಾ ಸಿಬ್ಬಂದಿ, ಸ್ವಚ್ಛತೆಗಾರರು, ಕಛೇರಿ ಪರಿಚಾರಕ, ಮುಸುರೆ ಒರೆಸುವವರು ಹಾಗೂ ಸ್ಥಾವೇಂಜರ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಅಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 18 ಕೊನೆಯ ದಿನವಾಗಿದೆ. ಎಲ್ಲಾ ಹುದ್ದೆಗಳಿಗೂ ಕನಿಷ್ಠ ವಯೋಮಿತಿ 18 ರಿಂದ 45 ವರ್ಷದೊಳಗಿರಬೇಕು.
ಮುಖ್ಯ ಅಡುಗೆ ತಯಾರಕರು, ಸಹಾಯಕ ಅಡುಗೆಯವರು ಕಂ ಊಟ ಬಡಿಸುವವರು, ಸ್ವಚ್ಛತೆಗಾರರು, ಭೋಜನಾಲಯದ ಮುಸುರೆ ಒರೆಸುವವರು, ಸ್ಕ್ಯಾವೆಂಜರ್ ಹುದ್ದೆಗಳ ಸಂದರ್ಶನವು ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲದಲ್ಲಿ ಸೆಪ್ಟಂಬರ್ 22 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದ್ದು ಹಾಗೂ ಸೆಪ್ಟಂಬರ್ 29 ರಂದು ಬೆಳಗ್ಗೆ 10 ಗಂಟೆಗೆ ಮಣಿಗಾರರು, ಗುಮಾಸ್ತರು, ಭದ್ರತಾ ಸಿಬ್ಬಂದಿ ಮತ್ತು ಕಚೇರಿ ಪರಿಚಾರಕ ಹುದ್ದೆಗಳ ಸಂದರ್ಶನ ನಡೆಯಲಿದೆ.
ಸಂರ್ದಶನಕ್ಕೆ ಪ್ರತೇಕ ಸೂಚನಪತ್ರ ನೀಡಲಾಗುವುದಿಲ್ಲ. ಸೂಚನೆ ಮತ್ತು ಸಂಪೂರ್ಣ ವಿವರವನ್ನು ಜಿಲ್ಲಾ ನ್ಯಾಯಾಲಯದ ಮಾಹಿತಿ ಫಲಕ ಮತ್ತು ಇಡಗುಂಜಿಯ ಶ್ರೀ ವಿನಾಯಕ ದೇವಾಲಯದ ಸೂಚನ ಫಲಕದಿಂದ ಪಡೆಯಬಹುದು ಎಂದು ರಿಸೀವರ್ ಶ್ರೀ ವಿನಾಯಕ ದೇವಾಲಯ, ಇಡಗುಂಜಿ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.