Slide
Slide
Slide
previous arrow
next arrow

“ಪ್ರಶಾಂತಿ ಫೌಂಡೇಶನ್”ಗೆ ರಾಷ್ಟ್ರೀಯ ಪುರಸ್ಕಾರ

300x250 AD

ಬಾಳೆಪಟ್ಟೆ ಕೈಗಾರಿಕಾ ಉತ್ಪನ್ನಗಳ ಉದ್ಯಮದಿಂದ ದಿವ್ಯಾಂಗರ ಪುನರ್ವಸತಿ ಸಾಧಿಸುತ್ತಿರುವ ಸಂಸ್ಥೆ

ಶಿರಸಿ: ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲಾ ಶಿರಸಿಯ ಸಾಮಾಜಿಕ ಉದ್ಯಮ “ಪ್ರಶಾಂತಿ ಫೌಂಡೇಶನ್” ಕಳೆದ ಹದಿನೆಂಟು ವರ್ಷಗಳಿಂದ ನಿರ್ವಹಿಸುತ್ತಿರುವ ದಿವ್ಯಾಂಗರ ಪುನರ್ವಸತಿ ಕಾರ್ಯವನ್ನು ಪರಿಗಣಿಸಿ“ಶ್ರೇಷ್ಠ ಸಾಮಾಜಿಕ ಮಹಿಳಾ ವಾಣಿಜ್ಯ ಸಂಸ್ಥೆ” ಎಂಬ ಪುರಸ್ಕಾರಕ್ಕೆ ಭಾಜನವಾಗಿದೆ. ಸಂಸ್ಥೆಯ ವಿಶ್ವಸ್ಥರಲ್ಲಿ ಪ್ರಮುಖರು, ಕಾರ್ಯದರ್ಶಿಗಳಾದ ಶ್ರೀಮತಿ ಮಾಲಾ ಗಿರಿಧರ ಆ. 21ರಂದು ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರ (NRCB) ತಿರುಚಿರಾಪಳ್ಳಿ ತಮಿಳನಾಡಿನಲ್ಲಿ ಪುರಸ್ಕಾರವನ್ನು ಸ್ವೀಕರಿಸಿದರು. ಉತ್ತರ ಕನ್ನಡ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಪ್ರಧಾನ ವಿಜ್ಞಾನಿಗಳು ಆದ ಡಾ.ರೂಪಾ ಪಾಟೀಲ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ICAR-NRCB ಯ 31 ನೇಸ್ಥಾಪನಾ ದಿನಾಚರಣೆ ಮತ್ತು ಕಿಸಾನ ಮೇಳದ ಅಂಗವಾಗಿ ಏರ್ಪಡಿಸಿದ “ಬಾಳೆ ವೈವಿಧ್ಯತೆ ಮತ್ತು ತ್ಯಾಜ್ಯದಿಂದ ಸಂಪತ್ತು” ಎಂಬ ಘನ ತತ್ವದ ಉದ್ದೇಶದ ಸಮಾರಂಭದಲ್ಲಿ ಪ್ರಧಾನ ಅತಿಥಿಗಳಾಗಿ ಭಾರತ ಸರಕಾರದ PPV&FRA ಚೇರಮನ್ ಡಾ. ತ್ರಿಲೋಚನ ಮಹಾಪಾತ್ರ,ನಿರ್ದೇಶಕರು NRCB ಡಾ.ವಿ.ಪಳನಿ ಮುತ್ತು,ಹೈದರಾಬಾದ ICAR ATARI ನಿರ್ದೇಶಕ ಡಾ.ಶೇಕ ಎನ್ ಮೀರಾ,ICAR ನ ಡಾ.ತಂಗವೇಲು, ಡಾ.ಕರ್ಪಾಗಮ್ ವೇದಿಕೆಯಲ್ಲಿದ್ದರು.

ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ಹದಿನೈದಕ್ಕೂ ಹೆಚ್ಚು ಬಗೆಯ ಬಾಳೆಪಟ್ಟೆ ಉತ್ಪನ್ನಗಳ ಉತ್ಪಾದನೆ, ಗ್ರಾಮೀಣ ಭಾಗಗಳಿಂದ ಬಾಳೆಪಟ್ಟೆ ಸಂಗ್ರಹಿಸಿ ಸಂಸ್ಕರಿಸುವ ಕಾರ್ಯಗಳನ್ನು ಹದಿನೈದು ವರ್ಷಗಳಿಂದ ಯಶಸ್ವಿಯಾಗಿ ನಿರ್ವಹಿಸುತ್ತಿದೆ.ನಮ್ಮ ಉತ್ಪನ್ನಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟಗಳಲ್ಲಿಯು ಗ್ರಾಹಕರ ಗಮನ ಸೆಳೆಯುತ್ತಿದೆ.ಹದಿನೈದು ಮಹಿಳೆಯರನ್ನು ಒಳಗೊಂಡಂತೆ ವಿವಿಧ ಅಂಗ ವೈಕಲ್ಯತೆ ಹೊಂದಿದ ಒಟ್ಟು ಮುವತ್ತು ಜನರು ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.ಸಾಮಾಜಿಕ ಬದುಕನ್ನು ಆರ್ಥಿಕವಾಗಿ, ಪಾರಿಸಾರಿಕವಾಗಿ ಪ್ರಭಾವಿಸುವಂಥ ವಾಣಿಜ್ಯ ಚಟುವಟಿಕೆಗಳೆ ಪ್ರಶಾಂತಿ ಫೌಂಡೇಶನ್ ನ ಕಾಳಜಿಯಾಗಿದೆ.

300x250 AD

ಉದ್ಯೋಗಾವಕಾಶದೊಂದಿಗೆ ಕೆಲಸದ ಸ್ಥಳಕ್ಕೆ ಸಾರಿಗೆ ಸಂಪರ್ಕ,ಮಧ್ಯಾನ್ಹದ ಊಟ ಮತ್ತು ಮಾಸಿಕ ವೇತನವನ್ನು ವ್ಯವಸ್ಥೆಗೊಳಿಸಲಾಗಿದೆ.ಕೀಳರಿಮೆ ಹೋಗಲಾಡಿಸಿ ಆತ್ಮಸಮ್ಮಾನ ಪೋಷಿಸಲು ಅವರಿಗೆ ಸಾರ್ಥಕ ಬದುಕಿನ ಒಲವು ಮೂಡಿಸಲು ಅವರ ಜನ್ಮ ದಿನಾಚರಣೆ,ಪ್ರವಾಸ,ಪರಿಸರ ವೀಕ್ಷಣೆ ಹಾಗು ಭಜನೆ ನೃತ್ಯಗಳಂಥ ಚೇತೋಹಾರಿ ಚಟುವಟಿಗಳನ್ನು ನಿರಂತರ ಪ್ರಶಾಂತಿ ಫೌಂಡೇಶನ್ ಆಯೋಜಿಸತ್ತಿದೆ. ನಮ್ಮ ಫಲಾನುಭವಿಗಳು ಹೆಚ್ಚಿನವರು ಆರ್ಥಿಕ ಹನ್ನೆಲೆಯವರು.ಅವರನ್ನು ದಿನವಿಡೀ ನೋಡಿಕೊಳ್ಳುವ ಮತ್ತು ಬಿಟ್ಟಿರಲಾರದ ಅವಲಂಬನೆಯ ಪಾಲಕರ ಚಿಂತೆಗೆ ಸಹನೀಯ ಪರಿಹಾರ ಒದಗಿಸಿದೆ. ಸಾಮಾಜಿಕ ಸ್ವಾಸ್ತ್ಯಕ್ಕೆ ನಮ್ಮ ಕೊಡುಗೆಯನ್ನು ಪರಿಗಣಿಸಿದ ಪುರಸ್ಕಾರ ಪ್ರಶಾಂತಿ ಫೌಂಡೇಶನ್ನಿಗೆ ನವಚೈತನ್ಯ ಪಡೆದಿದೆ.

Share This
300x250 AD
300x250 AD
300x250 AD
Back to top