Slide
Slide
Slide
previous arrow
next arrow

ಆ.29 ರಂದು ಜಿಲ್ಲಾ ಮಟ್ಟದ ಮ್ಯಾರಥಾನ್ ಓಟ

300x250 AD

ಕಾರವಾರ: ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಕಾರವಾರ ಇವರ ಸಹಯೋಗದಲ್ಲಿ ಯುವ ಜನೋತ್ಸವ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ 17 ರಿಂದ 25 ವರ್ಷದೊಳಗಿನ ಕಾಲೇಜು ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ 5 ಕಿ.ಮೀ ಮ್ಯಾರಥಾನ್ ಓಟವನ್ನು ಆ.29 ರಂದು ಬೆಳಗ್ಗೆ 6.45 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಇದರ ಮುಖ್ಯ ಉದ್ದೇಶ ಹೆಚ್.ಐ.ವಿ/ಏಡ್ಸ್ ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯವನ್ನು ತಡೆಗಟ್ಟುವುದು, ಹೆಚ್.ಐ.ವಿ ಮತ್ತು ಏಡ್ಸ್ (ತಡೆ) ಕಾಯ್ದೆ 2017, ನ್ಯಾಕೋ ಏಡ್ಸ್ ಆ್ಯಪ್, ಉಚಿತ ರಾಷ್ಟಿçÃಯ ಸಹಾಯವಾಣಿ 1097, ಎಸ್‌ಟಿಐ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುವುದು, ಸದರಿ ಸ್ಪರ್ಧೆಯಲ್ಲಿ ಭಾಗವಹಿಸುವ ಬೇರೆ ತಾಲೂಕಿನ ವಿದ್ಯಾರ್ಥಿಗಳಿಗೆ ಮಾತ್ರ ವಸತಿ ವ್ಯವಸ್ಥೆ ಮಾಡಲಾಗಿದೆ.
ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ಬಹುಮಾನ ರೂ. 10,000 (ಹುಡುಗ ಮತ್ತು ಹುಡುಗಿಗೆ ತಲಾ 5,000 ದಂತೆ) ದ್ವಿತೀಯ ಬಹಮಾನ ರೂ. 7,000 (ಹುಡುಗ ಮತ್ತು ಹುಡುಗಿಗೆ ತಲಾ ರೂ. 3,500 ದಂತೆ,) ತೃತೀಯ ಬಹುಮಾನ ರೂ. 5,000 (ಹುಡುಗ ಮತ್ತು ಹುಡುಗಿಗೆ ತಲಾ ರೂ.2,500 ದಂತೆ ) ಹಾಗೂ ಸಮಾಧಾನಕರ ಬಹುಮಾನ 8 ವಿದ್ಯಾರ್ಥಿಗಳಿಗೆ 4 ಹುಡುಗ ಹಾಗೂ 4 ಹುಡುಗಿಯರಿಗೆ ತಲಾ ರೂ.1,000 ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಎಸ್.ಬಿ.ಹಿರೇಮಠ ಮೊ.ಸಂಖ್ಯೆ :Tel:+919482187779, ವಿನೋದ ಹೊನ್ನಾವರ ಮೊ.ಸಂಖ್ಯೆ:Tel:+916362579485 ನ್ನು ಸಂಪರ್ಕಿಸುವAತೆ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top