ಶಿರಸಿ: ತಾಲೂಕಿನ ಗೋಳಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ವಾರ್ಷಿಕ ಸರ್ವಸಾಧಾರಣ ಸಭೆಯು ಗೋಳಿ ಶ್ರೀ ಸಿದ್ಧಿವಿನಾಯಕ ಸಭಾಭವನದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷರಾದ ಎಂ.ಎಲ್. ಹೆಗಡೆ ಹಲಸಿಗೆ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.
ಈ ಸಂದರ್ಭದಲ್ಲಿ ಗೋಳಿ ದೇವಸ್ಥಾನದ ಅಂತರ್ಜಾಲ ತಾಣ http://www.golidevasthana.in ಲೋಕಾರ್ಪಣೆಯನ್ನು ದೇವಸ್ಥಾನ ಅಧ್ಯಕ್ಷರಾದ ಎಂ.ಎಲ್. ಹೆಗಡೆ ಹಲಸಿಗೆ ಹಾಗೂ ಆಡಳಿತ ಸಮಿತಿಯ ಸದಸ್ಯರು ನೆರವೇರಿಸಿದರು. ನಂತರ ಮಾತನಾಡಿದ ಅವರು ಇಂದಿನ ತಂತ್ರಜ್ಞಾನ ಯುಗದಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟ ಮಾಹಿತಿ ಎಲ್ಲರಿಗೂ ಲಭ್ಯವಾಗಬೇಕು ಎಂಬ ಉದ್ದೇಶದಿಂದ ವೆಬ್ಸೈಟ್ ಅನ್ನು ನಿರ್ಮಾಣ ಮಾಡಲಾಗಿದೆ, ಭಕ್ತ ಜನರು ಉಪಯೋಗ ಪಡೆಯಬಹುದು ಎಂದರು.
ದೇವಸ್ಥಾನದ ಅಂತರ್ಜಾಲ ತಾಣದ ವಿನ್ಯಾಸ ಮಾಡಿರುವ ಸಾಫ್ಟವೇರ್ ತಂತ್ರಜ್ಞ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಮಾತನಾಡಿ, ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಾಗೂ ಶ್ರೀ ಸ್ವರ್ಣಗೌರಿ ದೇವಸ್ಥಾನಗಳ ಸ್ಥಳ ಪುರಾಣ-ಇತಿಹಾಸ ವಿವರವನ್ನು ನೀಡಲಾಗಿದೆ.
ಶ್ರೀ ದೇವರ, ದೇವಸ್ಥಾನದ ಸುಂದರ ಪರಿಸರದ ಫೋಟೋಗಳನ್ನು ಅಳವಡಿಸಲಾಗಿದೆ. ಸೇವಾ ವಿವರ ಹಾಗೂ ನಡೆಯುವ ವಾರ್ಷಿಕ ಧಾರ್ಮಿಕ ಕಾರ್ಯಕ್ರಮಗಳು, ಆಡಳಿತ ಸಮಿತಿಯ ಸದಸ್ಯರ ಮಾಹಿತಿ, ಹಾಗೂ ದೇವಸ್ಥಾನದ ಸಂಪರ್ಕ ವಿವರಗಳನ್ನು ವೆಬ್ಸೈಟ್ ನಲ್ಲಿ ನೀಡಲಾಗಿದೆ ಎಂದರು. ಅಂತರ್ಜಾಲ ತಾಣ ನಿರ್ಮಾಣದಲ್ಲಿ ಪ್ರಸನ್ನ ಹೆಗಡೆ ತಾರೇಹಳ್ಳಿ, ಪೂರಕ ಮಾಹಿತಿ ಒದಗಿಸಿ ನಂದನ ಹೆಗಡೆ ಹಲಸಿಗೆ ಹಾಗೂ ರಮಣ ಭಟ್, ಹರ್ಷ ಸ್ಟುಡಿಯೋದ ರಮೇಶ ಹೆಗಡೆ ಮತ್ತಿತರರು ಸಹಕರಿಸಿದ್ದಾರೆ ಎಂದರು.
ಆಡಳಿತ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಗುರುಪ್ರಸಾದ ಹೆಗಡೆ ಹರ್ತೆಬೈಲ್ ಅವರನ್ನು ಸನ್ಮಾನಿಸಿದರು. ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಹಿಂದಿನ ಸಭೆಯ ಠರಾವು, ವರ್ಷದ ಜಮಾ-ಖರ್ಚನ್ನು ಕಾರ್ಯದರ್ಶಿ ಶಿವಾನಂದ ಉಗ್ರೇಸರ ಓದಿದರು. ದೇವಸ್ಥಾನದ ತಾಂತ್ರಿಕರಾಗಿದ್ದ ಗೋಕರ್ಣದ ಷಡಕ್ಷರಿ ಕೃಷ್ಣ ಭಟ್ಟರು ಹಾಗೂ ಈ ಹಿಂದೆ ಆಡಳಿತ ಸಮಿತಿಯ ಸದಸ್ಯರಾಗಿದ್ದ ಶ್ರೀಪಾದ ಹೆಗಡೆ ಬಾವಿಕೈ ಅವರು ಇತ್ತೀಚೆಗೆ ಅಗಲಿದ್ದು, ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಉಮಾಪತಿ ಭಟ್ ಮತ್ತಿಗಾರ, ಕೆ.ಆರ್. ಹೆಗಡೆ ಅಮ್ಮಚ್ಚಿ, ವೆಂಕಟೇಶ ಹೆಗಡೆ ಹೊಸಬಾಳೆ, ಸುರೇಶ ಹೆಗಡೆ ಬಪ್ಪನಳ್ಳಿ, ಚಂದ್ರಕಾಂತ ಹೆಗಡೆ ನೇರ್ಲದ್ದ, ಸತೀಶ ಭಟ್ ಹೊಸಮನೆ, ದಿವಸ್ಪತಿ ಹೆಗಡೆ, ರಮಣ ಭಟ್, ರಘುಪತಿ ಕೊಡಗಿಪಾಲ, ಅರ್ಚಕರಾದ ಮಾಬ್ಲೇಶ್ವರ ಭಟ್, ಕೊಳಗಿಬೀಸ ಮಾರುತಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀಧರ ಹೆಗಡೆ ಹಾಗೂ ದೇವಸ್ಥಾನ ವ್ಯಾಪ್ತಿಯ ಭಕ್ತಾದಿಗಳು ಉಪಸ್ಥಿತರಿದ್ದರು.