ಯಲ್ಲಾಪುರ: ಸ್ವರಮಾಧುರಿ ಸಂಗೀತ ವಿದ್ಯಾಲಯ ಯಲ್ಲಾಪುರ ಇದರ ವಿದ್ಯಾರ್ಥಿಗಳಿಂದ ಗುರುಪೂರ್ಣಿಮೆಯ ನಿಮಿತ್ತ ಸಂಗೀತ ಗುರು ದಿ.ಪಂ.ಸಂದೀಪ ಉಡುಪ ಅವರಿಗೆ ಗುರುವಂದನೆ ಹಾಗೂ ನಾದಪೂರ್ಣಿಮಾ ಕಾರ್ಯಕ್ರಮ ಆ.15 ರಂದು ನಡೆಯಲಿದೆ.
ತಟಗಾರ ಜೋಡಳ್ಳದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಬೆಳಗ್ಗೆ 9ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ. ದೇವಸ್ಥಾನದ ಆಡಳಿತ ಮಂಡಳಿಯ ಸಹಕಾರದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಅನೇಕ ಕಲಾವಿದರು ಸಂಗೀತ ಸೇವೆ ನಡೆಸಲಿದ್ದಾರೆ. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಬೇಕೆಂದು ಸಂಘಟಕರಾದ ಗಣಪತಿ ಹೆಗಡೆ, ಸತೀಶ ಭಟ್ಟ ಹೆಗ್ಗಾರ, ಸುಧಾಮ ದಾನಗೇರಿ, ಸುಬ್ರಾಯ ಭಟ್ಟ ಜೋಡಳ್ಳ, ರಮೇಶ ಹೆಗಡೆ ಪ್ರಕಟಣೆಯಲ್ಲಿ ಕೋರಿದ್ದಾರೆ.